ಕೋಲ್ಕತ್ತ, ಆ 30 (DaijiworldNews/PY): ತನ್ನ 2 ವರ್ಷದ ಮಗುವಿಗೆ ಅಮಾನವೀಯವಾಗಿ ಹಿಂಸೆ ನೀಡಿದ್ದ 23 ವರ್ಷದ ಮಹಿಳೆಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಗುವಿಗೆ ಮನಬಂದಂತೆ ಥಳಿಸಿದ ತಾಯಿಯನ್ನು ತುಳಸಿ ಎಂದು ಗುರುತಿಸಲಾಗಿದೆ. ವಲ್ಲಿಪುರಂನ ವಡಿವಾಜಗನ್ ನಾಲ್ಕು ವರ್ಷದ ಹಿಂದೆ 22 ವರ್ಷದ ತುಳಸಿಯನ್ನು ವಿವಾಹವಾಗಿದ್ದರು. ಈ ದಂಪತಿ ತಮಿಳುನಾಡಿನ ಮೋತ್ತೂರು ಗ್ರಾಮದಲ್ಲಿ ವಾಸವಾಗಿದ್ದು, ಇವರಿಗೆ ಗೋಕುಲ್ (4) ಮತ್ತು ಪ್ರದೀಪ್ (2) ಇಬ್ಬರು ಮಕ್ಕಳಿದ್ದಾರೆ.
ವಡಿವಾಜಗನ್ ಹಾಗೂ ತುಳಸಿಯು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದರು. ಕೊನೆಗೆ ವಡಿವಾಜಗನ್ ತುಳಸಿಯನ್ನು ಆಂಧ್ರಪ್ರದೇಶದಲ್ಲಿನ ತವರು ಮನೆಯಲ್ಲಿ ಬಿಟ್ಟು ಬಂದಿದ್ದರು. ಈ ನಡುವೆ ತುಳಸಲಿ ತನ್ನ ಗೆಳೆಯನಿಗಾಗಿ ತನ್ನ ಮಗನನ್ನು ಹಿಂಸಿಸಿದಳೆಂದು ಶಂಕಿಸಲಾಗಿದೆ. ತುಳಸಿಯ ಸಂಬಂಧಿಕರು ಆಕೆಯ ಮಗುವಿಗೆ ಹೊಡೆದಿರುವ ವಿಡಿಯೋವನ್ನು ತುಳಸಿಯ ಫೋನ್ನಲ್ಲಿ ನೋಡಿದ್ದರು. ಈ ಬಗ್ಗೆ ತಕ್ಷಣವೇ ಅವರು ವಡಿವಾಜಗನ್ಗೆ ತಿಳಿಸಿದ್ದಾರೆ.
ತನ್ನ 18 ತಿಂಗಳ ಮಗುವಿಗೆ ತುಳಸಿ ಮುಷ್ಟಿ ಕಟ್ಟಿ ಮನಬಂದಂತೆ ಹೊಡೆದಿದ್ದು, ಮಗುವಿನ ಮೂಗು, ಬಾಯಿಯಲ್ಲಿ ರಕ್ತಸ್ರವಾವಾಗಲು ಶುರುವಾಯಿತು. ತನ್ನ ಮಗುವಿಗೆ ತುಳಸಿ ಆಗಾಗೆ ಹೊಡೆಯುತ್ತಿದ್ದು, ಅದನ್ನು ತನ್ನ ಫೋನ್ನಲ್ಲಿ ರೆಕಾರ್ಡ್ ಮಾಡಿದ್ದಳು ಎಂದು ತಿಳಿದುಬಂದಿದೆ.
ಇನ್ನೊಂದು ವಿಡಿಯೋದಲ್ಲಿ, ತುಳಸಿ, ಮಗುವಿನ ಕಾಲಿಗೆ ತನ್ನ ಮುಷ್ಟಿಯಿಂದ ಬಡಿಯುತ್ತಿರುವುದು ಕಂಡುಬಂದಿದೆ. ಇನ್ನೊಂದರಲ್ಲಿ ಮಗುವಿನ ಹಿಂಭಾಗವನ್ನು ಕ್ರೂರವಾಗಿ ಹೊಡೆದ್ದರಿಂದ ಮಗುವಿನ ಬೆನ್ನು ಕೆಂಪಾಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಇದನ್ನು ವಿಡಿಯೋದಲ್ಲಿ ಕಂಡ ವಡಿವಾಜಗನ್ ಕೂಡಲೇ ಆಂಧ್ರಪ್ರದೇಶಕ್ಕೆ ಧಾವಿಸಿದ್ದು, ಮಕ್ಕಳನ್ನು ತನ್ನೊಂದಿಗೆ ವಿಲ್ಲುಪುರಂಗೆ ಕರೆದೊಯ್ದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.