ವಿಜಯಪುರ, ಆ. 30 (DaijiworldNews/HR): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತ ಪೊಲೀಸ್ ಠಾಣೆಯ ಶೌಚಾಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಸಾಂಧರ್ಭಿಕ ಚಿತ್ರ
ಅಮಾನತುಗೊಂಡ ಪೊಲೀಸರನ್ನು ಸಿಂದಗಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಂಗಮೇಶ್ ಹೊಸಮನಿ, ಪೇದಗಳಾದಂತ ಹೆಚ್.ಸಿ.ಮಂತ್ರಿ, ಗುರುರಾಜ ಮಶಿಹಾಳ ಮತ್ತು ಆನಂದ ಪಾಟೀಲ್ ಎನ್ನಲಾಗಿದೆ.
ಈ ಕುರಿತಂತೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಅವರು, ಆದೇಶ ಹೊರಡಿಸಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ನಿಯಮಗಳ ಪ್ರಕಾರ ಅಮಾನತುಗೊಳಿಸಿದ್ದಾರೆ.
ಆಗಸ್ಟ್ 28ರಂದು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದಂತ ಆರೋಪಿ ದೇವೇಂದ್ರ ಸಂಗೋಗಿ (40) ನನ್ನು ಸಿಂದಗಿ ಠಾಣೆಯ ಪೊಲೀಸರು ಬಂಧಿಸಿದ್ದು, ಆತ ಭಾನುವಾರ ಶೌಚಾಲಯದಲ್ಲೇ ತನ್ನ ಪ್ಯಾಂಟ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.
ಇನ್ನು ಈ ಪ್ರಕರಣವನ್ನು ಲಾಕಪ್ ಡೆತ್ ಎಂದೇ ಕರೆಯಲಾಗಿದ್ದು, ಇದೀಗ ಈ ಪ್ರಕರಣ ಸಂಬಂಧ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.