ಪುಣೆ, ಆ 30 (DaijiworldNews/PY): ಕೊರೊನಾದ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆ ಸೌಮ್ಯ ಸ್ವರೂಪದ್ದಾಗಿರುತ್ತದೆ ಎಂದು ಐಸಿಎಂಆರ್ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಐಸಿಎಂಆರ್ನ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ.ಸಮೀರನ್ ಪಾಂಡಾ ಅವರು, "ಇಡೀ ದೇಶಕ್ಕೆ ಕೊರೊನಾ ಮೂರನೇ ಅಲೆ ಬರುತ್ತದೆ ಎಂದು ಯಾರೂ ಭಾವಿಸಿರಲಿಲ್ಲ" ಎಂದಿದ್ದಾರೆ.
"ಅವಧಿಗಿಂತ ಮುಂಚಿತವಾಗಿ ರಾಜ್ಯಗಳು ನಿರ್ಬಂಧಗಳನ್ನು ಸಡಿಲಿಸಿದರೆ ಮಾತ್ರವೇ ಈ ಅಲೆ ಕಾಣಿಸಿಕೊಳ್ಳಬಹುದು. ಕೊರೊನಾ ಮಾರ್ಗಸೂಚಿಗಳು ಉಲ್ಲಂಘನೆಯಾದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು" ಎಂದು ಹೇಳಿದ್ದಾರೆ.
"ಲಸಿಕೆಯ ಕಾರಣದಿಂದ ಪಾಸಿಟಿವಿಟಿ ಕಡಿಮೆಯಾಗುವುದು, ಡೆಲ್ಟಾದಂತಹ ಮಾರಕ ಪ್ರಬೇಧಗಳು ರೂಪುಗೊಳ್ಳುವುದು, ಇಲ್ಲವೇ, ಕೊರೊನಾ ನಿರ್ಬಂಧಗಳನ್ನು ಸಡಿಲಿಸುವುದು ಈ ರೀತಿಯಾದ ಕಾರಣಗಳು ಅಲೆಗೆ ಕಾರಣವಾಗಬಹುದಾದ ಪ್ರಮರುಖವಾದ ಅಂಶಗಳು" ಎಂದಿದ್ದಾರೆ.
"ಎರಡನೇ ಅಲೆಯ ಸಂದರ್ಭ ಕಡಿಮೆ ಪ್ರಕರಣಗಳಿದ್ದ ಜಿಲ್ಲೆಗಳಲ್ಲಿ ಈ ಬಾರಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು. ಹೆಚ್ಚು ಸೋಂಕಿನ ದರ ದಾಖಲಿಸಿದ ಜಿಲ್ಲೆಗಳಿಲ್ಲಿ ಅಧಿಕ ಕೊರೊನಾ ಪ್ರಕರಣಗಳ ಸಂಖ್ಯೆ ಕಂಡುಬರುವ ಸಾಧ್ಯತೆ ಕಡಿಮೆ" ಎಂದು ಹೇಳಿದ್ದಾರೆ.