ಬೆಂಗಳೂರು, ಆ 30 (DaijiworldNews/MS): ಬಿಜೆಪಿ ಸರ್ಕಾರವು ಜನರಿಗೆ ಭರವಸೆಯ ಬದುಕು ನೀಡಲಾಗದೆ ಉಚಿತ ಸಾವಿನ ಭಾಗ್ಯ ನೀಡುತ್ತಿದೆ ಎಂದು ವಿಪಕ್ಷ ಕಾಂಗ್ರೆಸ್ ಕಿಡಿಕಾರಿದೆ.
5 ಕೆಜಿ ಅಷ್ಟೇ ತಿನ್ನಿ ಎನ್ನುವ ಸಚಿವರ ಹೇಳಿಕೆ ಹಾಗೂ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯು ಸತ್ತರೆ ಉಚಿತ ಶವ ಸಂಸ್ಕಾರ ಎಂಬ ಪ್ರಣಾಳಿಕೆಯಲ್ಲಿನ ಉಲ್ಲೇಖದ ವಿಚಾರವಾಗಿ ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು" ಜನತೆಗೆ ಉತ್ತಮ ಬದುಕಿನ ಭರವಸೆ ನೀಡಲಾಗದ ಬಿಜೆಪಿ ಉಚಿತ ಶವ ಸಂಸ್ಕಾರದ ಭರವಸೆ ನೀಡುತ್ತಿದೆ!ಅಕ್ಕಿ ಕೇಳಿದವರಿಗೆ ಹೋಗಿ ಸಾಯ್ರಿ ಎಂದ ಬಿಜೆಪಿ ಸರ್ಕಾರ ಜನರ ಸಾವನ್ನೇ ಬಯಸುತ್ತಿದೆ. 5 ಕೆಜಿ ಅಷ್ಟೇ ತಿನ್ನಿ ಎನ್ನುವ ಮೂಲಕ ಜನರ ಹಸಿವನ್ನು ಅಣಕಿಸುವಬಿಜೆಪಿ ಸರ್ಕಾರ ಜನರಿಗೆ 'ಸಾವಿನಭಾಗ್ಯ' ಕೊಡಲು ಮುಂದಾಗಿದೆ" ಎಂದು ಹೇಳಿದೆ.
ಕಾಂಗ್ರೆಸ್ ಜನರ ಬದುಕನ್ನು ಹಸನಾಗಿಸಲು ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ನೀಡಿತು.ಬಿಜೆಪಿ ಭರವಸೆಯ ಬದುಕು ನೀಡಲಾಗದೆ ಉಚಿತ ಸಾವಿನ ಭಾಗ್ಯ ನೀಡುತ್ತಿದೆ! ಉದ್ಯೋಗ, ಅಕ್ಕಿ ನೀಡಲಾಗದೆ, ಬೆಲೆ ಏರಿಕೆ ತಡೆಯದೆ, ವೈದ್ಯಕೀಯ ವ್ಯವಸ್ಥೆ ನಿರ್ಮಿಸದೆ, ರಕ್ಷಣೆ ನೀಡದೆ ಜನತೆಗೆ ಸಾವು ಒಂದೇ ದಾರಿ ಎನ್ನುತ್ತಿದೆ ಎಂದು ಆರೋಪಿಸಿದೆ.