ನವದೆಹಲಿ, ಆ 30 (DaijiworldNews/PY): ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವೊಂದರಲ್ಲಿ ಅಫ್ಗಾನಿಸ್ತಾನದ ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಉಲ್ಲೇಖಿಸದೆ ಇರುವ ಸಾಧ್ಯತೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಈಗಾಗಲೇ ತಾಲಿಬಾನ್ನಿಂದ ತೊಂದರೆಗಳು ಆರಂಭವಾಗಿವೆ. ಹೀಗಿದ್ದರೂ ಕೂಡಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿರುವ ಭಾರತ ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆ ಎನ್ನುವ ಪದ ಕಿತ್ತುಹಾಕಿ ತೀರ್ಮಾನ ತೆಗದುಕೊಳ್ಳಲಿ ಮುಂದಾಗಿರುವುದನ್ನು ಕೇಳಿ ನನಗೆ ಆಶ್ಚರ್ಯವಾಗಿದೆ" ಎಂದು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಕಾರ್ಯದಶಿಗಳ ಕುರಿತು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಅವರ ಜೊತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಚರ್ಚೆ ನಡೆಸಿದ ಮಾರನೇ ದಿನ ಸ್ವಾಮಿ ಅವರು ಟೀಕಿಸಿದ್ದಾರೆ.