ಚಿಕ್ಕಮಗಳೂರು, ಆ. 29 (DaijiworldNews/HR): ಕರ್ನಾಟಕದಲ್ಲಿ ಹಂತ ಹಂತವಾಗಿ ಶಾಲಾ ಆರಂಭಕ್ಕೆ ತಜ್ಞರು ಸೂಚನೆ ನೀಡಿದ್ದು, ಮೊದಲು 6ರಿಂದ 8ನೇ ತರಗತಿ ಆರಂಭಿಸಲಾಗುತ್ತದೆ. ಆ ಬಳಿಕ 1 ರಿಂದ 5ನೇ ತರಗತಿ ಶಾಲೆಗಳ ಪ್ರಾರಂಭ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶಿಕ್ಷಣ ತಜ್ಞರು ಶಾಲೆಗಳ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ ಕೊಡುವುದನ್ನು ಕಾಯುತ್ತಿದ್ದು, ಅವರು ಅನುಮತಿ ನೀಡಿದ್ರೇ ರಾಜ್ಯದಲ್ಲಿ ಇನ್ನುಳಿದಂತ ತರಗತಿಗಳನ್ನು ಆರಂಭಿಸಲಾಗುತ್ತದೆ" ಎಂದರು.
ಇನ್ನು ಮೊದಲಿಗೆ 6 ರಿಂದ 8ನೇ ತರಗತಿಗಳನ್ನು ಪ್ರಾರಂಭಿಸಲಾಗುತ್ತದೆ. ಈ ಬಳಿಕ 1 ರಿಂದ 5ನೇ ತರಗತಿಗಳನ್ನು ಭೌತಿಕವಾಗಿ ಆರಂಭಿಸಲಾಗುತ್ತದೆ. ಶಿಕ್ಷಣ ಇಲಾಖೆ ಕೂಡ ಈ ನಿಟ್ಟಿನಲ್ಲಿ ಸಿದ್ಧತೆಯನ್ನು ಕೈಗೊಂಡಿದೆ" ಎಂದು ಹೇಳಿದ್ದಾರೆ.