ಬೆಳಗಾವಿ,ಆ. 29 (DaijiworldNews/HR): "ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಕೊರೊನಾಗೆ ಬಲಿಯಾಗಿದ್ದರು. ಆಗ ಮಾತನಾಡಿದರೆ ರಾಜಕೀಯವಾಗುತ್ತದೆಂದು ಮಾತನಾಡಿರಲಿಲ್ಲ. ನನ್ನ ಸ್ನೇಹಿತ ಸುರೇಶ್ ಅಂಗಡಿಯವರ ಮೃತ ದೇಹವನ್ನು ತರಲು ಬಿಜೆಪಿಗೆ ಆಗಲಿಲ್ಲ. ಕೇಂದ್ರದಲ್ಲಿ ರಾಜ್ಯದಲ್ಲಿ ಅವರದ್ದೇ ಸರ್ಕಾರವಿತ್ತು. ಆದರೂ ಇವರ ಯೋಗ್ಯತೆಗೆ ಮೃತದೇಹದ ತಂದು ಜನರಿಗೆ ದರ್ಶನ ಮಾಡಿಸಲಾಗಲಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಅವರು, "ಅಂತ್ಯಕ್ರಿಯೆ ಮಾಡಲು ಉಚಿತ ಎಂದು ಪ್ರನಾಳಿಕೆ ಹಾಕಿರುವ ಬಿಜೆಪಿಗೆ ನಾಚಿಕೆ ಆಗಬೇಕು. ಸಂಸ್ಕಾರ, ಸಂಸ್ಕೃತಿಗೆ ಅವಮಾನ ಮಾಡಿದ್ದೀರಿ. ಕೊರೊನಾ ಸಂದರ್ಭದಲ್ಲಿ ಯಾರಿಗೆ ಪರಿಹಾರ ಕೊಟ್ಟಿದ್ದೀರೆಂದು ಪಟ್ಟಿ ಬಿಡುಗಡೆ ಮಾಡಿ" ಎಂದು ಆಗ್ರಹಿಸಿದ್ದಾರೆ.
ಇನ್ನು "ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಾನಗರ ಪಾಲಿಕೆಯಲ್ಲಿ ರೆಜುಲೇಷನ್ ಪಾಸ್ ಮಾಡಿ 50% ಕಮರ್ಷಿಯಲ್ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಬೆಂಗಳೂರು ಜೊತೆಗೆ ಬೆಳಗಾವಿಯನ್ನು ಸ್ಪರ್ಧೆ ಮಾಡಲು ಯೋಜನೆ ಮಾಡಬೇಕು" ಎಂದು ಹೇಳಿದ್ದಾರೆ.