ನವದೆಹಲಿ, ಆ 29 (DaijiworldNews/PY): ಫಿಟ್ ಇಂಡಿಯಾ ಚಳುವಳಿಯ ಎರಡನೇ ವರ್ಷದ ವಾರ್ಷಿಕೋತ್ಸವದ ಸಂದರ್ಭ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಭಾನುವಾರ ವೈಯುಕ್ತಿಕ ತರಬೇತುದಾರ ಹಾಗೂ ಫಿಟ್ನೆಸ್ ಮಾರ್ಗದರ್ಶಿ ಫಿಟ್ ಇಂಡಿಯಾ ಮೊಬೈಲ್ ಆಪ್ ಅನ್ನು ಬಿಡುಗಡೆಗೊಳಿಸಿದರು.
ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, "ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನಾಚರಣೆಯಂದು ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾದಿನದಂದು ಈ ಆಪ್ ಅನ್ನು ದೇಶದ ಜನರಿಗೆ ಸರ್ಕಾರ ಉಡುಗೊರೆಯಾಗಿ ನೀಡಿದೆ" ಎಂದು ತಿಳಿಸಿದ್ದಾರೆ.
"ಫಿಟ್ ಇಂಡಿಯಾ ಆಪ್ ದೇಶದ ದೇಶದ ಕ್ರೀಡಾಪಟುಗಳಿಗೆ ಐಕಾನ್ ಆಗಿರುವ ಮೇಜರ್ ಧ್ಯಾನ್ ಚಂದ್ ಅವರಿಗೆ ನೀಡುವ ಗೌರವವಾಗಿದೆ" ಎಂದಿದ್ದಾರೆ.
"ಕ್ರೀಡಾಪಟುಗಳು ಫಿಟ್ ಆಗಿರಲು ಈ ಆಪ್ನ ಅಗತ್ಯವಿದ್ದು, ಈ ಆಪ್ ಅನ್ನು ಅನುಸರಿಸುವ ನಿರೀಕ್ಷೆ ಇದೆ. ನಾವು ಫಿಟ್ನೆಸ್ಗೆ ಪ್ರಾಮುಖ್ಯತೆ ನೀಡುವುದಿಲ್ಲ. ನಾವು ನಮ್ಮ ದಿನದ ಅರ್ಧ ಗಂಟೆಯನ್ನು ಫಿಟ್ನೆಸ್ಗೆ ಮೀಸಲಿಡಬೇಕು" ಎಂದು ಹೇಳಿದ್ದಾರೆ.
"ಈ ಆಪ್ ಸಹಾಯಕವಾಗಿದ್ದು, ಬಳಸಲು ಸುಲಭವಾಗಿದೆ. ಇದು ನಮ್ಮ ಫಿಟ್ನೆಸ್ಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸಿದ್ದೇನೆ" ಎಂದಿದ್ದಾರೆ.