ನವದೆಹಲಿ, 29 (DaijiworldNews/HR): ರಾಮಾಯಣದ ಪ್ರಚಾರವು ಮುಖ್ಯವಾಗಿದ್ದು, ಅದು ನೀಡುವ ಜೀವನದ ಅಂತರ್ಗತ ಮೌಲ್ಯಗಳು ಯಾವಾಗಲೂ ಮಾನವೀಯತೆಗೆ ಪ್ರಸ್ತುತವಾಗಿರುತ್ತವೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಾಯಣ ಸಮಾವೇಶವನ್ನ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು "ರಾಮಾಯಣದ ಪ್ರಚಾರವು ಮುಖ್ಯವಾಗಿದ್ದು, ಅದು ನೀಡುವ ಜೀವನದ ಅಂತರ್ಗತ ಮೌಲ್ಯಗಳು ಯಾವಾಗಲೂ ಮಾನವೀಯತೆಗೆ ಪ್ರಸ್ತುತವಾಗಿರುತ್ತವೆ. ತತ್ವಶಾಸ್ತ್ರದ ಜೊತೆಗೆ ರಾಮಾಯಣವು ನಮ್ಮ ಜೀವನದ ಎಲ್ಲಾ ಆಯಾಮಗಳಲ್ಲಿ ಮಾರ್ಗದರ್ಶನ ನೀಡುವ ಮಾದರಿ ನೀತಿ ಸಂಹಿತೆಯನ್ನು ಕೂಡ ನೀಡುತ್ತದೆ" ಎಂದರು.
ಇನ್ನು "ರಾಮಾಯಣ ಸಮಾವೇಶವನ್ನು ಆಯೋಜಿಸುವ ಮೂಲಕ ಕಲೆ ಮತ್ತು ಸಂಸ್ಕೃತಿಯ ಮೂಲಕ ರಾಮಾಯಣವನ್ನ ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯಲು ಉತ್ತರ ಪ್ರದೇಶ ಸರ್ಕಾರ ಇಂದು ಆರಂಭಿಸಿರುವ ಅಭಿಯಾನಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ತಂಡವನ್ನ ಶ್ಲಾಘಿಸುತ್ತೇನೆ" ಎಂದು ಹೇಳಿದ್ದಾರೆ.