ಇಂದೋರ್, ಆ 29 (DaijiworldNews/PY): ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಜೈ ಶ್ರೀರಾಮ್ ಹೇಳಲು ಒತ್ತಾಯಿಸಿದ ಇಬ್ಬರನ್ನು ಉಜ್ಜಯಿನಿ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಇಬ್ಬರು ವ್ಯಕ್ತಿಗಳು ಮುಸ್ಲಿಂ ವ್ಯಕ್ತಿಯನ್ನು ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸುತ್ತಿರುವದನ್ನು ಕಾಣಬಹುದು.
ಆರಂಭದಲ್ಲಿ, ಜೈಶ್ರೀರಾಮ್ ಎಂದು ಹೇಳಲು ಇಷ್ಟವಿಲ್ಲ ಎಂದು ಮುಸ್ಲಿಂ ವ್ಯಕ್ತಿ ಹೇಳುತ್ತಾನೆ. ಈ ವೇಳೆ ಇಬ್ಬರು ವ್ಯಕ್ತಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ಏನು ಸಮಸ್ಯೆ? ಎಂದು ಕೇಳಿದ್ದಾರೆ. ಬಳಿಕ ಇಬ್ಬರು ವ್ಯಕ್ತಿಯಗಳ ಒತ್ತಾಯದ ಮೇರೆಗೆ ಆತ ಜೈ ಶ್ರೀರಾಮ್ ಎಂದು ಹೇಳಿದ್ದಾನೆ.
"ಇಬ್ಬರು ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ" ಎಂದು ಉಜ್ಜಯಿನಿ ಪೊಲೀಸರು ಹೇಳಿದ್ದಾರೆ.