ಹಾವೇರಿ, 29 (DaijiworldNews/HR): ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರ ಮನೆ ಬಾಗಿಲಿಗೆ ಪಶು ಸಂಜೀವಿನಿ ಆಯಂಬುಲೆನ್ಸ್ ವ್ಯವಸ್ಥೆ ಯೋಜನೆ ಆರಂಭ ಮಾಡಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿ ಮೊದಲ ಬಾರಿಗೆ ಪಶು ಸಂಜೀವಿನಿ ಆಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ರೈತರ ಮನೆ ಬಾಗಿಲಿಗೆ ಆಂಬುಲೆನ್ಸ್ ಹೋಗುತ್ತದೆ. ಶೀಘ್ರದಲ್ಲೇ ಪ್ರತಿ ಜಿಲ್ಲೆಗೆ ಒಂದು ಆಯಂಬುಲೆನ್ಸ್ ಕೊಡುತ್ತೇವೆ" ಎಂದರು.
ಇನ್ನು ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿದ್ದು, ಗೋಹತ್ಯೆ ನಿಷೇಧದ ಬಗ್ಗೆ ಇಲಾಖೆ ಅಧಿಕಾರಿಗಳು ಗ್ರಾಮ ಸಭೆಗಳನ್ನ ಮಾಡಬೇಕು. ಗೋವುಗಳು ಕಸಾಯಿ ಖಾನೆಗೆ ಹೋಗೋದು ತಡೆಯಬೇಕು. ಪ್ರತಿ ಜಿಲ್ಲೆಗೊಂದು ಗೋಶಾಲೆ ಮಾಡುವುದು ನಮ್ಮ ಅಜೆಂಡಾ. ಜಿಲ್ಲೆಗೆ 50ರಿಂದ 100 ಎಕರೆ ಜಾಗದಲ್ಲಿ ಗೋಶಾಲೆ ಆರಂಭವಾಗುತ್ತೆ" ಎಂದು ಹೇಳಿದ್ದಾರೆ.