ನವದೆಹಲಿ, 29 (DaijiworldNews/HR): ಭಾರತದಿಂದ ಹೊರಡುವ ಮತ್ತು ಆಗಮಿಸುವಂತ ಅಂತಾರಾಷ್ಟ್ರೀಯ ನಿಗದಿತ ವಾಣಿಜ್ಯ ಪ್ರಯಾಣಿಕರ ವಿಮಾನಗಳ ಮೇಲಿನ ಅಮಾನತನ್ನು ಸರ್ಕಾರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.
ಸಾಂದರ್ಭಿಕ ಚಿತ್ರ
ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ 23 ರಿಂದ ಭಾರತದಿಂದ ಹೊರಡುವ ಮತ್ತು ಆಗಮಿಸುವಂತ ಎಲ್ಲಾ ನಿಗದಿತ ಅಂತರರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಲಾಗಿದ್ದು, ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿರ್ಬಂಧಗಳು ಆಗಸ್ಟ್ 31, 2021ರಂದು ಕೊನೆಗೊಳ್ಳಬೇಕಿತ್ತು. ಆದಾಗ್ಯೂ, ಮೂರನೇ ಅಲೆಯ ಕಳವಳಗಳ ನಡುವೆ ಮತ್ತೆ ವಿಸ್ತರಿಸಲಾಗಿದೆ.
ಇನ್ನು ಇತ್ತೀಚಿನ ಸುತ್ತೋಲೆಯ ಪ್ರಕಾರ, ಸೆಪ್ಟೆಂಬರ್ 30, 2021 ರ ಭಾರತೀಯ ಪ್ರಮಾಣಿತ ಸಮಯ (ಐಎಸ್ ಟಿ) 2359 ಗಂಟೆಯವರೆಗೆ ನಿಷೇಧ ಜಾರಿಯಲ್ಲಿರತಕ್ಕದ್ದು. ಇದು ಸರಕು ವಿಮಾನಗಳು ಮತ್ತು ನಿಯಂತ್ರಣ ಸಂಸ್ಥೆಯಿಂದ ಅನುಮೋದಿಸಲ್ಪಟ್ಟವುಗಳಿಗೆ ಅನ್ವಯಿಸುವುದಿಲ್ಲ.
ಈ ನಿರ್ಬಂಧವು ಅಂತರರಾಷ್ಟ್ರೀಯ ಆಲ್-ಕಾರ್ಗೋ ಕಾರ್ಯಾಚರಣೆಗಳು ಮತ್ತು ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಸುತ್ತೋಲೆ ಉಲ್ಲೇಖಿಸಿದೆ.