ಆಗ್ರಾ, ಆ 29 (DaijiworldNews/PY): ಒಂದೂವರೆ ವರ್ಷದ ಮಗುವೊಂದು ಆಟವಾಡುತ್ತಿದ್ದ ಸಂದರ್ಭ ತಲೆಯನ್ನು ಪ್ರೆಷರ್ ಕುಕ್ಕರ್ ಒಳಗೆ ಸಿಲುಕಿಸಿಕೊಂಡಿದ್ದ ಮಗುವನ್ನು ರಕ್ಷಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಲೋಹಮಂಡಿಯಲ್ಲಿರುವ ಖಾಟಿಪುರದ ಬಳಿ ಈ ಘಟನೆ ನಡೆದಿದೆ. ಮನೆಯಲ್ಲಿ ಕುಕ್ಕರ್ ಅನ್ನು ಕೆಳಗೆ ಇಟ್ಟಿದ್ದರು. ಈ ವೇಳೆ ಮಗು ಆಟವಾಡುತ್ತಾ ಅದನ್ನು ಎತ್ತಿಕೊಂಡು ತಲೆಯೊಳಕ್ಕೆ ಸಿಕ್ಕಿಸಿಕೊಂಡಿದೆ. ಮನೆಯವರು ಏನೇ ಸಾಹಸ ಮಾಡಿದರೂ ಮಗುವಿನ ತಲೆಯನ್ನು ಹೊರಕ್ಕೆ ತೆಗೆಯಲು ಸಾಧ್ಯವಾಗಿಲ್ಲ.
ಬಳಿಕ ಪೋಷಕರು ವೈದ್ಯರಿಗೆ ಕರೆ ಮಾಡಿದ್ದಾರೆ. ಈ ವೇಳೆ ಗ್ರೈಂಡರ್ ಯಂತ್ರದೊಂದಿಗೆ ಸ್ಥಳಕ್ಕೆ ಧಾವಿಸಿದ ವೈದ್ಯರ ತಂಡ ಸತತ ಎರಡು ಗಂಟೆಗಳ ಕಾಲ ಶ್ರಮ ವಹಿಸಿ ಯಂತ್ರದಿಂದ ಕುಕ್ಕರ್ ಅನ್ನು ಕಟ್ ಮಾಡಿ ಮಗುವಿನ ಪ್ರಾಣ ರಕ್ಷಿಸಿದ್ದಾರೆ.