ನವದೆಹಲಿ, ಆ 29 (DaijiworldNews/PY): "ಯುವಕರು ಕ್ರೀಡೆ, ಕೌಶಲ್ಯ ವೃದ್ಧಿಯತ್ತ ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಮನ್ ಕಿ ಬಾತ್ನಲ್ಲಿ ಮಾತನಾಡಿದ ಅವರು, "ಭಾರತದ ಯುವ ಪೀಳಿಗೆ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದೆ. ಬಾಹ್ಯಾಕಾಶ ವಲಯವನ್ನು ತೆರೆದ ಬಳಿಕ, ಅನೇಕ ಯುವಕರು ಅದರ ಬಗ್ಗೆ ಆಸಕ್ತಿಯೊಂದಿಗೆ ಮುಂದೆ ಬಂದಿದ್ದಾರೆ" ಎಂದು ಹೇಳಿದ್ದಾರೆ.
"ಇಂದಿನ ಯುವ ಮನಸ್ಸು ಹಳೆ ರೀತಿಯಲ್ಲಿ, ಸವೆದುಹೋದ ಮಾರ್ಗದಿಂದ ಹೊಸದನ್ನು ಮಾಡಲು ಬಯಸುತ್ತದೆ. ಬಾಹ್ಯಕಾಶ ವಲಯವನ್ನು ತೆರೆದ ಬಳಿಕ ಅನೇಕ ಯುವಕರು ಅದರ ಬಗ್ಗೆ ಆಸಕ್ತಿಹೊಂದಿದ್ದು, ಮುಂದೆ ಬಂದಿದ್ದಾರೆ. ಇಂದು ಸ್ಟಾರ್ಟ್ ಅಪ್ ಸಂಸ್ಕೃತಿಯು ಸಣ್ಣ ಪಟ್ಟಣಗಳಲ್ಲಿಯೂ ವಿಸ್ತರಿಸುತ್ತಿದೆ" ಎಂದಿದ್ದಾರೆ.
"ದೇಶದಲ್ಲಿ 62 ಕೋಟಿಗೂ ಅಧಿಕ ಕೊರೊನಾ ಲಸಿಕೆ ಡೋಸ್ಗಳನ್ನು ನೀಡಲಾಗಿದೆ. ಕೊರೊನಾ ಬಗ್ಗೆ ನಾವು ಜಾಗರೂಕರಾಗಿರಬೇಕು. ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ನಾವು ಈ ವರ್ಷ ಪ್ರತಿದಿನ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಹೊಸದನ್ನು ಯೋಚಿಸಬೇಕು" ಎಂದು ತಿಳಿಸಿದ್ದಾರೆ.
"ಲಸಿಕೆಯ ಬಗೆಗಿನ ವದಂತಿ ನಂಬದೇ ರೋಗ ಹರಡುವುದನ್ನು ನಿಯಂತ್ರಿಸಲು ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಕೈ ಜೋಡಿಸಬೇಕು" ಎಂದು ಹೇಳಿದ್ದಾರೆ.