ನವದೆಹಲಿ, 29 (DaijiworldNews/HR): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರ ಮುಂಬೈ ನಿವಾಸದ ಮೇಲೆ ಎನ್ಸಿಬಿಯು ಶನಿವಾರ ದಾಳಿ ನಡೆಸಿದ್ದು, ಇಂದು ಅವರನ್ನು ಬಂಧಿಸಿ ನಗರದ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಶನಿವಾರ ಸಂಜೆ ಅರ್ಮಾನ್ ಅವರ ಮನೆಯ ಮೇಲೆ ದಾಳಿ ನಡೆಸಿದ ಬಳಿಕ ಎನ್ಸಿಬಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ಅವರು ನಟನನ್ನು ದಕ್ಷಿಣ ಮುಂಬೈನ ಕಚೇರಿಗೆ ವಿಚಾರಣೆಗಾಗಿ ಕರೆದೊಯ್ದಿದಿದ್ದು, ದಾಳಿಯ ಬಳಿಕ ನಟ ಅರ್ಮಾನ್ ಕೊಹ್ಲಿ ಎನ್ಸಿಬಿ ಹಾಕಿದ ಪ್ರಶ್ನೆಗಳಿಗೆ ಅಸ್ಪಷ್ಟ ಉತ್ತರಗಳನ್ನು ನೀಡಿದರು. ನಂತರ ಅವರನ್ನು ಎನ್ ಸಿಬಿ ಕಚೇರಿಯಲ್ಲಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಯಿತು ಎಂಬುದಾಗಿ ತಿಳಿಸಿದ್ದಾರೆ.
ಇನ್ನು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದ ಬಳಿಕ ಎನ್ಸಿಬಿ ಸಿನಿಮಾ ಹಾಗೂ ಕಿರುತೆರೆಯ ಕೆಲವು ಸೆಲೆಬ್ರಿಟಿಗಳು ಮಾದಕ ವಸ್ತು ಬಳಸುತ್ತಿರುವ ಕುರಿತು ತನಿಖೆ ಕೈಗೊಂಡಿದೆ.