ಬಾಗಲಕೋಟೆ, 29 (DaijiworldNews/HR): ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮಧುರಖಂಡಿ ಗ್ರಾಮದಲ್ಲಿ ಆಸ್ತಿ ವ್ಯಾಜ್ಯದ ಸಲುವಾಗಿ ನಡೆದ ನಾಲ್ವರ ಸಹೋದರರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಹಣಮಂತ ಮುದರಡ್ಡಿ (45), ಬಸವರಾಜ ಮುದರಡ್ಡಿ (37), ಈಶ್ವರ ಮುದರಡ್ಡಿ (35) ಮತ್ತು ಮಲ್ಲು ಮುದರಡ್ಡಿ (33) ಎಂಬ ಸಹೋದರರ್ ಕೊಲೆಯಾಗಿದ್ದರು.
ಗ್ರಾಮದ ಮುದರಡ್ಡಿ ಮತ್ತು ಪುಠಾಣಿ ಮನೆತನದ ನಡುವೆ ಆಸ್ತಿ ವಿಚಾರವಾಗಿ ಜಗಳ ನಡೆದಿದ್ದು, ಈ ವೇಳೆ ಪುಠಾಣಿ ಮನೆತನದವರು ಮುದರಡ್ಡಿ ಮನೆತನದ ನಾಲ್ಕು ಜನ ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಇನ್ನು ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಸಣ್ಣೆರಿ ರಸ್ತೆಯ ತೋಟದ ವಸ್ತಿಯಲ್ಲಿ ಈ ಘಟನೆ ನಡೆದಿದ್ದು, ಹಲವಾರು ವರ್ಷಗಳಿಂದ ಈ ಎರಡು ಮನೆತನದ ನಡುವೆ ಆಸ್ತಿ ಸಲುವಾಗಿ ಜಗಳಗಳು ನಡೆಯುತ್ತಿತ್ತು ಎನ್ನಲಾಗಿದೆ.