ಮುಂಬೈ, ಆ 29 (DaijiworldNews/PY): "ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರ ಮುಂಬೈ ನಿವಾಸದ ಮೇಲೆ ಎನ್ಸಿಬಿ ದಾಳಿ ನಡೆಸಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಕಿರುತೆರೆ ನಟ ಗೌರವ್ ದೀಕ್ಷಿತ್ ಅವರನ್ನು ಶುಕ್ರವಾರ ಕೇಂದ್ರ ಮಾದಕ ವಸ್ತು ನಿಯಂತ್ರಣ ದಳ ಬಂಧಿಸಿತ್ತು. ಇದರ ಮುಂದುವರಿದ ಭಾಗವಾಗಿ ಅರ್ಮಾನ್ ಕೊಹ್ಲಿ ಅವರ ಮನೆ ಮೇಲೆ ದಾಳಿ ನಡೆದಿದೆ" ಎಂದು ಎನ್ಸಿಬಿಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದ ಬಳಿಕ ಎನ್ಸಿಬಿ ಸಿನಿಮಾ ಹಾಗೂ ಕಿರುತೆರೆಯ ಕೆಲವು ಸೆಲೆಬ್ರಿಟಿಗಳು ಮಾದಕ ವಸ್ತು ಬಳಸುತ್ತಿರುವ ಕುರಿತು ತನಿಖೆ ಕೈಗೊಂಡಿದೆ.