ಕೇರಳ, ಆ.28 (DaijiworldNews/HR): ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇರಳದಲ್ಲಿ ಸೋಮವಾರ ಆಗಸ್ಟ್ 29ರಿಂದ ರಾತ್ರಿ ಕರ್ಫ್ಯೂ ಜಾರಿಗೆ ತರಲಾಗಿದೆ.
ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆ ತನಕ ಕರ್ಫ್ಯೂ ಜಾರಿಗೆ ತರಲು ಇಂದು ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಅವಲೋಕನಾ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಭಾನುವಾರ ಸಂಪೂರ್ಣ ಲಾಕ್ ಡೌನ್ ಮತ್ತೆ ಜಾರಿಗೆ ತರಲಾಗಿದೆ.
ಪ್ರತಿವಾರ ಏಳು ಶೇಕಡಾಕ್ಕಿಂತ ಅಧಿಕ ಸೋಂಕು ಹೊಂದಿರುವ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ದೇಶದ ಎಲ್ಲಾ ರಾಜ್ಯಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದರೂ ಕೇರಳ ಈ ನಿಟ್ಟಿನಲ್ಲಿ ವೈಫಲ್ಯ ಕಂಡಿದ್ದು, ಪ್ರತಿ ದಿನ ದಾಖಲಾಗುವ ಸೋಂಕಿತರಲ್ಲಿ ಶೇಕಡಾ 80 ರಷ್ಟು ಕೇರಳದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಮೊದಲ ಕೊರೊನಾ ಅಲೆ ಆರಂಭದಲ್ಲೇ ನಿಯಂತ್ರಣಕ್ಕೆ ತರಲು ಸಫಲವಾಗಿದ್ದ ಕೇರಳ ವು ಎರಡನೇ ಅಲೆಯಿಂದ ನಲುಗುವಂತೆ ಮಾಡಿದ್ದು, ಕಳೆದ ಮೂರು ದಿನಗಳಿಂದ ಪ್ರತಿದಿನ ಸೋಂಕಿತರ ಸಂಖ್ಯೆ 30 ಸಾವಿರ ದಾಟುತ್ತಿದೆ. ಮೂರನೇ ಅಲೆ ಸಮೀಪದಲ್ಲಿರುವುದರಿಂದ ಇದೀಗ ಗಂಭೀರವಾಗಿ ತೆಗೆದುಕೊಂಡಿರುವ ಸರಕಾರ ಹಲವು ರೀತಿಯ ನಿಯಂತ್ರಣಕ್ಕೆ ಮುಂದಾಗಿದೆ.