ಬೆಂಗಳೂರು, ಆ 28 (DaijiworldNews/MS): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಬಿಜೆಪಿ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಹೇಳಿಕೆ ವಿರುದ್ದ ಹರಿಹಾಯ್ದಿರುವ ಕಾಂಗ್ರೆಸ್ , ಬಿಜೆಪಿ ಪಕ್ಷವೂ ಅತೀ ವಿಕೃತ ಮನಸ್ಥಿತಿಗಳನ್ನ ತರಬೇತಿ ನೀಡಿ ತಯಾರು ಮಾಡುತ್ತದೆ ಎಂದು ಕಿಡಿಕಾರಿದೆ.
ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕವೂ ಟ್ವೀಟ್ ಮಾಡಿದ್ದು, ’ಮಾನವೀಯತೆ ಇಲ್ಲದ, ಸಂವೇದನೆಗಳೂ ಇಲ್ಲದ ಬಿಜೆಪಿ ಪಕ್ಷವೂ ಅತೀ ವಿಕೃತ ಮನಸ್ಥಿತಿಗಳನ್ನ ತರಬೇತಿ ನೀಡಿ ತಯಾರು ಮಾಡುತ್ತದೆ. ಹೀಗೆ ತಯಾರಾದ ಬಿಜೆಪಿಗರು ಯಾವುದೇ ಲಜ್ಜೆ ಇಲ್ಲದೆ ವರ್ತಿಸುತ್ತಾರೆ. ಅಧಿಕಾರಕ್ಕಾಗಿ ಹಪಹಪಿಸಿ ಆಡಳಿತ ಹಿಡಿದ ಬಿಜೆಪಿಗರು ಹೀಗೆ ಹೊಣೆಗೇಡಿಗಳಾಗಿರುವುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡು ಅಧಿಕಾರದಿಂದ ದೂರ ಇಡಬೇಕು ಎಂದು ಹೇಳಿದೆ.
ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಮೈಸೂರಿನಲ್ಲಿ ನಡೆದ ಘಟನೆಯ ಬಗ್ಗೆ ನನಗೆ ಏನು ತಿಳಿದಿಲ್ಲ. ನಾನು ಬೆಳಗ್ಗೆ ಮನೆಯಿಂದ ಹೊರಟರೆ ಮನೆಗೆ ವಾಪಾಸ್ಸು ಬರುವುದು ರಾತ್ರಿ 11 ಗಂಟೆಯಾಗುತ್ತದೆ. ಹಾಗಿರುವಾಗ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಬಗ್ಗೆ ನನ್ನನ್ನು ಕೇಳಿದರೆ ನನಗೇನು ಗೊತ್ತು?. ಈ ಬಗ್ಗೆ ನಾನೇನು ಹೇಳಲು ಸಾಧ್ಯ?. ನಾನು ನೋಡಿದ್ದೇನಾ, ಮಾಡಿದ್ದೇನಾ?" ಎಂದು ಪ್ರಶ್ನಿಸಿದ್ದು ಈ ಹೇಳಿಕೆ ಜನಾಕ್ರೋಶಕ್ಕೆ ಕಾರಣವಾಗಿತ್ತು