ನವದೆಹಲಿ, ಆ 28 (DaijiworldNews/PY): "ಕೇಂದ್ರ ಸರ್ಕಾರವು ಬಿಜೆಪಿಯ ಕೋಟ್ಯಧಿಪತಿ ಸ್ನೇಹಿತರಿಗೆ ಅನುಕೂಲವಾಗುವಂತೆ ಹೊಸ ಮೂರು ಕೃಷಿ ಕಾನೂನುಗಳನ್ನು ರೂಪಿಸಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ದೂರಿದ್ದಾರೆ.
ಟ್ವೀಟ್ನಲ್ಲಿ ವರದಿಯೊಂದನ್ನು ಉಲ್ಲೇಖಿಸಿರುವ ಅವರು, "ರೈತರು ಶ್ರಮಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಹಾಗೂ ಇತರ ವಸ್ತುಗಳನ್ನು ನಿರ್ಧರಿಸುವ ಹಕ್ಕನ್ನು ಬಿಜೆಪಿಯ ಕೋಟ್ಯಧಿಪತಿ ಸ್ನೇಹಿತರಿಗೆ ನೀಡಿದರೆ ಹೀಗೆ ಸಂಭವಿಸುತ್ತದೆ. ಇದು ಮಾರುಕಟ್ಟೆಯಲ್ಲಿ ರೈತರ ಸಂಕಷ್ಟಕ್ಕೆ ಕಾರಣವಾಗಿದೆ" ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಮೂರು ಕಪ್ಪು ಕೃಷಿ ಕಾನೂನುಗಳನ್ನು ಏಕೆ ರೈತರು ವಿರೋಧಿಸುತ್ತಿದ್ದಾರೆ?. ಏಕೆಂದರೆ ರೈತರ ಶ್ರಮದಿಂದ ಬೆಳೆದ ಬೆಳೆಗಳಿಗೆ ಬೆಲೆ ಹಾಗೂ ಇತರ ವಸ್ತುಗಳನ್ನು ತೀರ್ಮಾನಿಸುವ ಹಕ್ಕನ್ನು ಬಿಜೆಪಿಯ ಕೋಟ್ಯಧಿಪತಿ ಸ್ನೇಹಿತರಿಗೆ ನೀಡಿದರೆ, ಅದೇ ಆಗುತ್ತದೆ" ಎಂದು ಹೇಳಿದ್ದಾರೆ.
"ಕಪ್ಪು ಕೃಷಿ ಕಾನೂನುಗಳನ್ನು ರೂಪಿಸಿರುವುದು ಬಿಜೆಪಿಯ ಕೋಟ್ಯಧಿಪತಿ ಸ್ನೇಹಿತರ ಅನುಕೂಲಕ್ಕಾಗಿ" ಎಂದು ಆರೋಪಿಸಿದ್ದಾರೆ.