ಮೈಸೂರು, ಆ 28 (DaijiworldNews/PY): "ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯಿಂದ ಇಡೀ ಮೈಸೂರು ತಲೆತಗ್ಗಿಸುವಂತಾಗಿದ್ದು, ಪೊಲೀಸರು ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಬೇಕು" ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈ ರೀತಿಯಾದ ಕಹಿ ಘಟನೆಗಳನು ನಡೆದ ಸಂದರ್ಭ ಪೊಲೀರು ಎನ್ಕೌಂಟರ್ ಮಾಡುವ ದಿಟ್ಟತನ ತೋರಬೇಕು. ಆ ಸಲುವಾಗಿ ಸರ್ಕಾರ ಕೂಡಾ ಸೂಕ್ತವಾದ ನಿರ್ದೇಶನ ನೀಡುವುದ ಅಗತ್ಯ" ಎಂದಿದ್ದಾರೆ.
"ರಾಜಕೀಯದಲ್ಲಿ ಜಿ.ಟಿ ದೇವೇಗೌಡ ಅವರಿಗೆ ಬಹಳ ವರ್ಷಗಳ ಅನುಭವವಿದೆ. ಏನು ತೀರ್ಮಾನ ಕೈಗೊಳ್ಳಬೇಕು ಎನ್ನುವ ಬಗ್ಗೆ ಅವರಿಗೆ ತಿಳಿದಿದೆ. ಈಗಲೂ ಅವರು ನಮ್ಮ ನಾಯಕರು. ಚುನಾವಣೆ ಇನ್ನೂ ಎರಡು ವರ್ಷ ಇದೆ. ಎಲ್ಲಾ ಗೊಂದಲಗಳನ್ನು ಬಗೆಹರಿಸಿ ನಮ್ಮೊಂದಿಗೆ ಇರುವ ವಿಶ್ವಾಸವಿದೆ" ಎಂದು ತಿಳಿಸಿದ್ದಾರೆ.