ಮುಂಬೈ, ಆ 28 (DaijiworldNews/PY): 16 ವರ್ಷದ ಬಾಲಕ ಪಬ್ಜಿ ಆಡಿ ತಾಯಿಯ ಖಾತೆಯಲ್ಲಿದ್ದ 10 ಲಕ್ಷ ರೂ. ಖಾಲಿ ಮಾಡಿದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಪಬ್ಜಿ ಹುಚ್ಚಿಗೆ ಬಿದ್ದಿದ್ದ ಬಾಲಕ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಪಬ್ಜಿ ಆಡುತ್ತಿದ್ದು, ತಾಯಿಯ ಖಾತೆಯಲ್ಲಿದ್ದ 10 ಲಕ್ಷ ರೂ. ಖಾಲಿ ಮಾಡಿದ್ದಾನೆ. ಈ ವಿಚಾರ ಪೋಷಕರಿಗೆ ತಿಳಿಯುತ್ತಿದ್ದಂತೆ ಕೋಪಗೊಂಡ ಏಟು ನೀಡಿದ್ದಾರೆ. ಇದರಿಂದ ಕೋಪಗೊಂಡ ಬಾಲಕ ಮನೆ ಬಿಟ್ಟು ಹೋಗಿದ್ದಾನೆ.
ಮನೆ ಬಿಟ್ಟು ಹೋದ ಬಾಲಕ ವಾಪಾಸ್ಸು ಬಾರದೇ ಇರುವುದನ್ನು ಗಮನಿಸಿದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪಬ್ಜಿ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದಿದ್ದು, ಹಾಗಾಗಿ ಮಗ ಮನೆ ಬಿಟ್ಟು ಹೋಗಿದ್ದಾನೆ ಎಂದು ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು, ಬಾಲಕನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂಧೇರಿ ಬಳಿ ಬಾಲಕ ಸಿಕ್ಕಿದ್ದಾನೆ. ಬಳಿಕ ಬಾಲಕನಿಗೆ ಬುದ್ದಿ ಹೇಳಿ, ಪೋಷಕರಿಗೆ ಒಪ್ಪಿಸಿದ್ದಾರೆ.