ನಾಗ್ಪರ, ಆ 28 (DaijiworldNews/MS): ಮಸ್ಕತ್ ನಿಂದ ಢಾಕಾಗೆ ಹೊರಟಿದ್ದ ಪ್ರಯಾಣಿಕರ ವಿಮಾನದ ಪೈಲಟ್ ಗೆ ಹೃದಯಾಘಾತವಾದ ಪರಿಣಾಮ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.
ಬಿಮನ್ ಏರ್ ಬಿಜಿ-022 ವಿಮಾನವು ಮಸ್ಕತ್ ನಿಂದ ಢಾಕಾಗೆ ತೆರಳುತ್ತಿತ್ತು. 126 ಪ್ರಯಾಣಿಕರನ್ನು ಹೊತ್ತ ವಿಮಾನ ಶುಕ್ರವಾರದಂದು ವಿಮಾನ ನಿಲ್ದಾಣದಲ್ಲಿ ಇಳಿದಿದ್ದು ಪೈಲಟ್ ಆರೋಗ್ಯ ಈಗ ಸ್ಥಿರವಾಗಿದೆ ತಿಳಿದು ಬಂದಿದೆ.
ಶುಕ್ರವಾರ ಬೆಳಿಗ್ಗೆ, ನಾಗ್ಪುರ ಏರ್ ಟ್ರಾಫಿಕ್ ಕಂಟ್ರೋಲರ್ ಬಿಮನ್ ಏರ್ ಕಾಕ್ ಪಿಟ್ ನಿಂದ ಪೈಲಟ್ ಗೆ ತೀವ್ರ ಹೃದಯಾಘಾತವಾಗಿದೆ ಎಂದು ಸಂದೇಶ ಸ್ವೀಕರಿಸಿದ್ದು ತಕ್ಷಣ ಇಳಿಯಲು ಸಹಾಯಬೇಕೆಂದು ಕೇಳಲಾಯಿತು.
ವಿಮಾನ ಇಳಿದ ಬಳಿಕ ಕೂಡಲೇ ಆಂಬ್ಯುಲೆನ್ಸ್ ನೊಂದಿಗೆ ವೈದ್ಯಕೀಯ ತಂಡವನ್ನು ಪೈಲಟ್ ನ ಸ್ಥಳಕ್ಕೆ ಸಾಗಿಸಲಾಯಿತು' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.