ಮೈಸೂರು, ಆ.27 (DaijiworldNews/HR): ಮೈಸೂರಿನಲ್ಲಿ ನಡೆದ ದರೋಡೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ರಾಜ್ಯ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, "ಆಗಸ್ಟ್ 23ರಂದು ನಡೆದಿದ್ದಂತ ಅಮೃತ್ ಗೋಲ್ಡ್ ಆಂಡ್ ಸಿಲ್ವರ್ ಪ್ಯಾಲೇಸ್ ದರೋಡೆ ಪ್ರಕರಣ ಸಂಬಂಧ, ಮೊದಲು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಐವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ ಆರೋ ಆರೋಪಿಗಳನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ" ಎಂದು ತಿಳಿಸಿದರು.
ಬಂಧಿತ ಆರೋಪಿಗಳಲ್ಲಿ ಒಬ್ಬರು ಮೈಸೂರು, ಮತ್ತೊಬ್ಬರು ಬೆಂಗಳೂರಿನವರಾಗಿದ್ದಾರೆ. ಪಶ್ಚಿಮ ಬಂಗಾಳ, ಮುಂಬೈಯಿ ರಾಜಸ್ಥಾನದ ತಲಾ ಒಬ್ಬರು ಆಗಿದ್ದಾರೆ. ಆರನೇ ಆರೋಪಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧಿಸಲಾಗಿದೆ.
ಈ ಕೃತ್ಯ ನಡೆಸಿದ ಬಳಿಕ ಐವರು ಐದು ದಿಕ್ಕಿಗೆ ತೆರಳಿದ್ದು, 8 ಜನರಲ್ಲಿ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.