ಬೆಂಗಳೂರು, ಆ.27 (DaijiworldNews/HR): ಕರ್ನಾಟಕದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದಲ್ಲಿ ಹೆಣ್ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಸುರಕ್ಷಿತರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಾತನಾಡಿದ ಅವರು, "ಒಟ್ಟು ಪ್ರಕರಣವನ್ನು ನೋಡಿದರೆ ಇದಕ್ಕೆ ಗೃಹ ಸಚಿವರು ಮಾತ್ರ ಕಾರಣರಲ್ಲ. ರ್ಕಾರ ಕಾರಣವಾಗುತ್ತೆ. ಗೃಹ ಸಚಿವರು ಹೊಸದಾಗಿ ಮಂತ್ರಿಯಾಗಿದ್ದಾರೆ. ಅವರ ಬಗ್ಗೆಯೇ ಮಾತನಾಡುವುದಲ್ಲ. ಇದಕ್ಕೆ ಇಡೀ ಸರ್ಕಾರ ಕಾರಣವಾಗಿದೆ" ಎಂದರು.
ಇನ್ನು ನಾನು ಗೃಹ ಸಚಿವರ ಬಗ್ಗೆ ಮಾತನಾಡುವುದಿಲ್ಲ. ಇದಕ್ಕೆ ಉತ್ತರ ಕೊಡಬೇಕಾಗಿರುವುದು ಮುಖ್ಯಮಂತ್ರಿ. ಈ ಸರ್ಕಾರದಲ್ಲಿ ಹೆಣ್ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಸುರಕ್ಷಿತರಲ್ಲ. ಇದಕ್ಕೆ ಮೈಸೂರಿನಲ್ಲಿ ನಡೆದ ಪ್ರಕರಣವೇ ಸಾಕ್ಷಿ" ಎಂದು ಹೇಳಿದ್ದಾರೆ.