ಬೆಂಗಳೂರು, ಆ.27 (DaijiworldNews/HR): ಬೆಂಗಳೂರಿನಲ್ಲಿ ಆಗಸ್ಟ್ 23ರಂದು ನಡೆದಿದ್ದ ಬಾಯ್ಲರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತೊಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಸಾಂಧರ್ಭಿಕ ಚಿತ್ರ
ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಶಾಂತಿ (35) ಮೃತಪಟ್ಟಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯ ಗೋಪಾಲಪುರದ 5ನೇ ಕ್ರಾಸ್ ಬಳಿಯಲ್ಲಿನ ಖಾದ್ಯ ತಯಾರಿಕಾ ಘಟಕದಲ್ಲಿ ಬಾಯ್ಲರ್ ಸ್ಪೋಟಗೊಂಡು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಈ ಬಳಿಕ ಆಗಸ್ಟ್.24ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಧನಲಕ್ಷ್ಮೀ ಮತ್ತು ಸಚಿನ್ ಕೂಡ ಮೃತಪಟ್ಟು, ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದದ್ದು, ಇಂದು ಮತ್ತೊಬ್ಬರು ಮೃತಪಟ್ಟಿದ್ದಾರೆ.
ಇನ್ನು ಈ ಮೂಲಕ ಬಿಹಾರ ಮೂಲದ ಮನೀಶ್ ಕುಮಾರ್, ಸೌರವ್, ಧನಲಕ್ಷ್ಮೀ, ಸಚಿನ್ ಮತ್ತು ಶಾಂತಿ ಸೇರಿ ಐವರು ಮೃತಪಟ್ಟಿದ್ದಾರೆ.