ಮೈಸೂರು, ಆ.27 (DaijiworldNews/HR): ನಾನೇ ಈ ಬಸ್ ನಿಲ್ದಾಣ ಮಾಡಿಸಿದ್ದು ಎಂದು ರಾಜಕಾರಣಿಗಳು ಬಸ್ ನಿಲ್ದಾಣಗಳಲ್ಲಿ ಬೋರ್ಡ್ ಹಾಕಿಕೊಳ್ಳುವಂತೆ, ರಾಜ್ಯದ ಪ್ರತಿ ಬಸ್ ನಿಲ್ದಾಣಗಳಲ್ಲಿ ಅತ್ಯಾಚಾರ ಎಸಗಿದವರಿಗೆ ಯಾವ ಶಿಕ್ಷೆ ಆಗಲಿದೆ ಎನ್ನುವ ಬೋರ್ಡ್ ಹಾಕಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆಗ್ರಹಿಸಿದ್ದಾರೆ.
ಮೈಸೂರು ಗ್ಯಾಂಗ್ ರೇಪ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ಅತ್ಯಾಚಾರ ಸಂತ್ರಸ್ತೆಗೆ ನಿರ್ಭಯ ಯೋಜನೆಯ ಅಡಿಯಲ್ಲಿ ಪರಿಹಾರ ನೀಡಬೇಕು. ಮೈಸೂರನ್ನು ಕೆಲವರು ಉತ್ತರ ಪ್ರದೇಶಕ್ಕೆ, ಮತ್ತೆ ಕೆಲವರು ತಾಲಿಬಾನ್ ಗೆ ಹೊಲಿಸುತ್ತಿದ್ದಾರೆ. ಇದು ನೋವಿನ ಸಂಗತಿಯಾಗಿದೆ" ಎಂದರು.
ಇನ್ನು ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದು, ನಾನು ಈ ಬಗ್ಗೆ ಒಂದು ತಿಂಗಳ ಹಿಂದೆಯೇ ಹೇಳಿದ್ದೆ. ಶಿಖಾ ಡಿಸಿ ಆಗಿದ್ದಾಗ ಅವರ ವಿರುದ್ಧ ರಾಜಕಾರಣಿಗಳು ಹೇಗೆ ವರ್ತಿಸಿದ್ರು ಎಂದು ಎಲ್ಲರಿಗೂ ಗೊತ್ತಿದೆ" ಎಂದಿದ್ದಾರೆ.