ನವದೆಹಲಿ, ಆ 27 (DaijiworldNews/MS): ಭಾರತೀಯರ ದೇಹಕ್ಕೆ ಹೊಂದಿಕೊಳ್ಳುವಂತಹ ಸಿದ್ದ ಉಡುಪಿನ ಅಳತೆ ಚಾರ್ಟ್ ಪರಿಚಯಿಸುವ ಗುರಿಯೊಂದಿಗೆ ಜವಳಿ ಸಚಿವಾಲಯ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (NIFT) ಯ ಜಂಟಿಯಾಗಿ ಹೊಸ ಯೋಜನೆಯೊಂದು ಹಾಕಿಕೊಂಡಿದೆ ಹೀಗಾಗಿ ಶೀಘ್ರದಲ್ಲೇ "ಇಂಡಿಯನ್ ಸೈಜ್ ಚಾರ್ಟ್" ಸಿದ್ದ ಉಡುಪು ಕ್ಷೇತ್ರದಲ್ಲಿ ಪರಿಚಯವಾಗಲಿದೆ.
ಯುಎಸ್ ಆಳತೆ, ಯುಕೆ ಆಳತೆಯ ಚಾರ್ಟ್ ಇರುವಂತೆ ಸಿದ್ಧ ಉಡುಪು ವಲಯದಲ್ಲಿ ಭಾರತಕ್ಕೆ ಹೊಸ ಪ್ರಮಾಣಿತ ಗಾತ್ರದ ಚಾರ್ಟ್ ಅನ್ನು ಪರಿಚಯಿಸುವ ಗುರಿಯೊಂದಿಗೆ ಸರ್ಕಾರವು INDIAsize ಎಂಬ ಶೀರ್ಷಿಕೆಯಡಿಯಲ್ಲಿ ಗುರುವಾರ ಅಧಿಕೃತವಾಗಿ ಸಮೀಕ್ಷೆಯನ್ನು ಆರಂಭಿಸಿದೆ. ಯುಎಸ್ನಲ್ಲಿ "ಮಧ್ಯಮ" ಟ್ಯಾಗ್ ಭಾರತದಲ್ಲಿ "ದೊಡ್ಡ" ಮೈಕಟ್ಟು ಹೊಂದಿರುವ ವ್ಯಕ್ತಿಗೆ ಹೇಗೆ ಹೊಂದಿಕೊಳ್ಳುತ್ತದೆ? ಈ ಗೊಂದಲವನ್ನು ಹೋಗಲಾಡಿಸಲು ಈ ಸಮೀಕ್ಷೆ ಉಪಕಾರಿಯಾಗಿರಲಿದೆ.
ಸಿದ್ಧ ಉಡುಪು ವಲಯದಲ್ಲಿ ಭಾರತಕ್ಕೆ ಹೊಸ ಪ್ರಮಾಣಿತ ಗಾತ್ರದ ಚಾರ್ಟ್ ಅನ್ನು ಪರಿಚಯಿಸುವುದು ಯೋಜನೆಯ ಉದ್ದೇಶವಾಗಿದೆ.
ಯೋಜನೆಯನ್ನು ಫೆಬ್ರವರಿ 2019 ರಲ್ಲಿ ಘೋಷಿಸಲಾಯಿತು, ಕೊವೀಡ್ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಗಿ ಪ್ರಾರಂಭವಾಗಿದೆ.
ಜವಳಿ ವಲಯವು ದೇಶದ ಎರಡನೇ ಅತಿದೊಡ್ಡ ಉದ್ಯೋಗಗಿಗಳನ್ನು ಹೊಂದಿರುವ ಮತ್ತು ಸುಮಾರು 140 ಬಿಲಿಯನ್ ರೂಪಾಯಿಗಳ ವಹಿವಾಟು ನಡೆಸುವ ವ್ಯವಹಾರವಾಗಿದೆ ಅದರಲ್ಲಿ 100 ಬಿಲಿಯನ್ ರೂಪಾಯಿ ವ್ಯವಹಾರ ಭಾರತೀಯ ಗ್ರಾಹಕರಿಂಲೇ ಆಗುತ್ತದೆ . ಇನ್ನುಳಿದ ಕೇವಲ 40 ಬಿಲಿಯನ್ ರೂಪಾಯಿ ವ್ಯವಹಾರ ರಫ್ತು ಮಾಡುವುದರಿಂದ ಆಗುತ್ತದೆ. ಹೀಗಾಗಿ ಭಾರತೀಯ ಆಳತೆ ಚಾರ್ಟ್ ನಿಜಕ್ಕೂ ಅವಶ್ಯಕತೆ ಇದೆ. ಇದಕ್ಕಾಗಿ ದೆಹಲಿ, ಚೆನ್ನೈ, ಮುಂಬೈ, ಹೈದರಾಬಾದ್, ಶಿಲ್ಲಾಂಗ್ ಮತ್ತು ಕೋಲ್ಕತಾಗಳಲ್ಲಿ ಮುಂತಾದ ಪ್ರದೇಶ ಸುಮಾರು 5,700 ಹೆಚ್ಚು ಜರನ ಅಳತೆ ಪಡೆಯುವ ಗುರಿಯನ್ನು ಹೊಂದಿದೆ.
ಹೊಸ ಗಾತ್ರದ ಚಾರ್ಟ್ , ಮ್ಯಾಪಿಂಗ್ ಮಾಡಿ ಪಡೆಯಲಾದ ದೇಹದ ಗಾತ್ರ , ಅಳತೆ,ವರ್ಗೀಕರಣ ಮತ್ತು ವ್ಯಾಖ್ಯಾನದಿಂದ ರಚಿಸಲಾಗಿರುವ ಆಳತೆಯ ಗುರುತಿನ ಸಂಖ್ಯೆಯನ್ನು ಹೊಂದಿರುತ್ತದೆ, ಪ್ರಸ್ತುತ, ವಿಶ್ವದ ಸುಮಾರು 18 ದೇಶಗಳು ಮಾತ್ರ ತಮ್ಮದೇ ಗಾತ್ರದ ಪಟ್ಟಿಯನ್ನು ಹೊಂದಿವೆ ಎಂದು ಜವಳಿ ಕಾರ್ಯದರ್ಶಿ ಉಪೇಂದ್ರ ಪ್ರಸಾದ್ ಸಿಂಗ್ ವಿವರಿಸಿದ್ದಾರೆ.
ನಾವು ಪ್ರತಿಯೊಬ್ಬ ಭಾಗವಹಿಸುವವರಿಂದ ಸುಮಾರು 100 ಆಂಥ್ರೊಪೊಮೆಟ್ರಿಕ್ ಡೇಟಾ ಪಾಯಿಂಟ್ಗಳನ್ನು ಬಳಸುತ್ತಿದ್ದೇವೆ ಇದು ವಿವಿಧ ವಯೋಮಾನದವರು, ವಿವಿಧ ಜನಾಂಗಗಳ ಭಾಗವಹಿಸುವವರನ್ನು ಹೊಂದಿರುತ್ತದೆ. ನಮಗೆ ಅಧ್ಯಯನವು ವೈಜ್ಞಾನಿಕವಾದ ಸಂಶೋಧನಾತ್ಮಕವಾಗಿರಲಿದ್ದು ಇವೆಲ್ಲವೂ ನಮಗೆ ಸಮಗ್ರ ಮತ್ತು ಪ್ರಮಾಣಿತ ಗಾತ್ರದ ಚಾರ್ಟ್ ಅನ್ನು ತರಲು ಸಹಾಯ ಮಾಡುತ್ತದೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ಡಿಜಿ ಶಾಂತಮನು ಹೇಳಿದ್ದಾರೆ.