ಬೆಂಗಳೂರು, ಆ 27 (DaijiworldNews/MS): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರವಾಗಿ ಕಾಂಗ್ರೆಸ್ - ಬಿಜೆಪಿ ಪರಸ್ಪರ ಆರೋಪ - ಪ್ರತ್ಯಾರೋಪದಲ್ಲಿ ತೊಡಗಿದೆ. ಇದೇ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ದ ಮತ್ತೊಬ್ಬ ಕಿಡಿಕಾರಿರುವ ಕಾಂಗ್ರೆಸ್ ಬಿಜೆಪಿ ಪಾಲಿಗೆ "ಬೇಟಿ ಬಚಾವೋ" ಎಂಬ ಘೋಷಣೆ ಮೋದಿ ಫೋಟೋ ಇರುವ ಜಾಹಿರಾತಿಗೆ ಮಾತ್ರ!ಎಂದು ಕಿಡಿಕಾರಿದ್ದಾರೆ.
ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಅತ್ಯಾಚಾರ ಘಟನೆ ನಡೆದಿವೆ ಎಂಬ ಸಚಿವ ಶಿವರಾಂ ಹೆಬ್ಬಾರ್ ವಿರುದ್ದವೂ ತಿರುಗಿಬಿದ್ದಿರುವ ಕಾಂಗ್ರೆಸ್ ನಡೆದಿದೆ ಸ್ವಾಮಿ, ಆದರೆ ಆಗ ಯಾರೂ ಹೊಣೆಗೇಡಿತನ ಪ್ರದರ್ಶಿಸಲಿಲ್ಲ, ಅಸಂಬದ್ಧ ಮಾತುಗಳನ್ನಾಡಲಿಲ್ಲ. ಅತ್ಯಾಚಾರದಂತಹ ಗಂಭೀರ ಕೃತ್ಯವನ್ನು ಸಮಾನ್ಯಕರಿಸುವ ಪ್ರಯತ್ನ ಮಾತಾಡುತ್ತಿರುವ ಬಿಜೆಪಿ ತಾಲಿಬಾನ್ ಮನಸ್ಥಿತಿ ಹೊಂದಿದೆ.ಬಿಜೆಪಿ ಪಾಲಿಗೆ "ಬೇಟಿ ಬಚಾವೋ" ಎಂಬ ಘೋಷಣೆ ಮೋದಿ ಫೋಟೋ ಇರುವ ಜಾಹಿರಾತಿಗೆ ಮಾತ್ರ!ಅದರ ಅಸಲಿ ಅರ್ಥ ನಿಮ್ಮ ಹೆಣ್ಣುಮಕ್ಕಳನ್ನು ನೀವೇ ಬಚಾವು ಮಾಡಿಕೊಳ್ಳಿ ಬಿಜೆಪಿ ಸರ್ಕಾರದಿಂದ ಅಸಾಧ್ಯ ಎಂದು. ಎಲ್ಲಾ ಕಡೆ ಪೊಲೀಸ್ ರಕ್ಷಣೆ ನೀಡಲು ಅಸಾಧ್ಯವೆಂದು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಹೇಳಿಕೆಯೇ ಇದಕ್ಕೆ ನಿದರ್ಶನ ಎಂದು ಕಿಡಿಕಾರಿದೆ.
ಮತ್ತೊಂದು ಟ್ವೀಟ್ ಮಾಡಿ , ಗೃಹಸಚಿವರೇ,ರಾಜ್ಯದಲ್ಲಿ ಮಹಿಳೆಯರು ಸಂಜೆ ಏಳು ಗಂಟೆಯ ನಂತರ ಹೊರಗೆ ಬರಬಾರದು ಎಂಬ ನಿಮಯ ಮಾಡುವಿರಾ? ಬಿಜೆಪಿ ಹಾಗೂ ತಾಲಿಬಾನಿಗಳ ನೀತಿ ಒಂದೇ ಆಗಿರುವಾಗ ಈ ಬಗೆಯ ನಿಯಮ ಜಾರಿಗೊಳಿಸಿದರೂ ಅಚ್ಚರಿ ಏನಿಲ್ಲ! ಅತ್ಯಾಚಾರವೆಸಗಿದ್ದು, ಕಾನೂನು ಸುವ್ಯವಸ್ಥೆಯ ಲೋಪವಾಗಿದ್ದು ತಪ್ಪಾಗಿ ಕಾಣದೆ, ಸಂತ್ರಸ್ತೆ ಹೊರಬಂದಿದ್ದೇ ತಪ್ಪಾಗಿ ಕಂಡಿದ್ದು ವಿಪರ್ಯಾಸ ಎಂದುಕಾಂಗ್ರೆಸ್ ಹೇಳಿದೆ.