ನಾಗ್ಪುರ, ಆ.27 (DaijiworldNews/HR): "ಅಫ್ಗಾನಿಸ್ತಾನದಿಂದ ಬರುವ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು" ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ನ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಭಾರತಕ್ಕೆ ಅಫ್ಗಾನಿಸ್ತಾನದಿಂದ ಬರುವ ಮುಸ್ಲಿಮರಿಗೆ ಆಶ್ರಯ ಕಲ್ಪಿಸಬಾರದು. ಆದರೆ ಅಲ್ಲಿಂದ ಬರುವ ಹಿಂದೂ ಮತ್ತು ಸಿಖ್ ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬೇಕು" ಎಂದರು.
ಇನ್ನು "ಭಾರತವು ತಾಲಿಬಾನ್ ಉದ್ದೇಶದ ಕೇಂದ್ರಬಿಂದುವಾಗಿರುವುದರಿಂದ ದೇಶವು ಬಹಳ ದೊಡ್ಡ ಅಪಾಯ ಎದುರಿಸುತ್ತಿದ್ದು, ದೇಶವು ತಾಲಿಬಾನೀಕರಣ ಆಗುವುದನ್ನು ತಡೆಯಬೇಕಿದೆ" ಎಂದು ಹೇಳಿದ್ದಾರೆ.