ಕೋಲ್ಕತ್ತಾ, ಆ 26 (DaijiworldNews/MS): ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುವ ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಗಸ್ಟ್ 25ರ ರಾತ್ರಿ ಕೋಲ್ಕತ್ತಾದ ನಿಯೀಟಿಯಾ ಆಸ್ಪತ್ರೆಗೆ ದಾಖಲಾಗಿದ್ದ ನುಸ್ರತ್ ಜಹಾನ್, ಗುರುವಾರ ಚೊಚ್ಚಲ ಹೆರಿಗೆಯಾಗಿದೆ. ನಟ ಯಶ್ ದಾಸ್ ಗುಪ್ತಾ ನುಸ್ರತ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದು ದಾಖಲಿಸಿದ್ದರು. ಸಂಸದೆ ನುಸ್ರತ್ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ನುಸ್ರತ್ ಮತ್ತು ಉದ್ಯಮಿ ನಿಖಿಲ್ ಜೈನ್ 2019ರಲ್ಲಿ ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಕೆಲವೇ ದಿನಗಳಲ್ಲಿ ಇವರಿಬ್ಬರು ಬೇರೆಬೇರೆಯಾಗಿದ್ದರು. ತಾಉ ಟರ್ಕಿಯಲ್ಲಿ ವಿವಾಹವಾಗಿರುವ ಹಿನ್ನಲೆಯಲ್ಲಿ ಭಾರತೀಯ ಕಾನೂನುಗಳ ಪ್ರಕಾರ ತಮ್ಮ ವಿವಾಹ ಮಾನ್ಯವಲ್ಲ ಎಂದು ನುಸ್ರತ್ ಹೇಳಿಕೊಂಡಿದ್ದರು. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು.
ಭಾರತದಲ್ಲಿ ನಮ್ಮಿಬ್ಬರ ಮದುವೆಯನ್ನು ನೋಂದಾಯಿಸಲು ನುಸ್ರತ್ ಮಾಡಿದ ಹಲವಾರು ಬಾರಿ ಮಾಡಿದ ವಿನಂತಿಯಿಂದ ನುಸ್ರತ್ ತಪ್ಪಿಸಿಕೊಳ್ಳುತ್ತಿದ್ದರು ಎಂದು ನಿಖಿಲ್ ಹೇಳಿಕೊಂಡಿದ್ದಾನೆ.
ನಿಖಿಲ್ ಜೈನ್ ವಿರುದ್ಧ ಆರೋಪಿಸಿದ್ದ ನುಸ್ರತ್ ಆಕೆಯ ಒಡವೆ, ವಸ್ತ್ರಗಳನ್ನು ಅಕ್ರವಾಗಿ ಅವರ ಕುಟುಂಬ ಪಡೆದಿತ್ತು, ನಿಖಿಲ್ ತಮ್ಮ ಬ್ಯಾಂಕ್ ಖಾತೆಯನ್ನು ಅಕ್ರಮವಾಗಿ ಬಳಸಿದ್ದಾರೆ. ತಮ್ಮ ಖಾತೆಯಲ್ಲಿನ ಹಣವನ್ನು ಅಕ್ರಮ ಬಳಕೆ ಮಾಡಿದ ಕಾರಣ ಬ್ಯಾಂಕ್ ಗಳ ನೋಟಿಸ್ನ್ನು ನಾನು ಎದುರಿಸಿದ್ದೇನೆ. ಇದಕ್ಕೆ ಪುರಾವೆಗಳು ತನ್ನ ಬಳಿ ಇವೆ ಎಂದು ತಮ್ಮ ಗಂಡನ ಬಗ್ಗೆ ದೂರಿದ್ದರು.