ಬೆಂಗಳೂರು,ಆ 26 (DaijiworldNews/MS): ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೃದಯ ಬಡಿತ ಕಡಿಮೆಯಾಗಿ ಬಳಲಿಕೆ ಕಂಡುಬಂದ ಹಿನ್ನಲೆ ಬುಧವಾರ ಜಯದೇವ ಆಸ್ಪತ್ರೆಗೆ ದೊಡ್ಡಣ್ಣ ದಾಖಲಾಗಿದ್ದಾರೆ. ಪೇಸ್ ಮೇಕರ್ ಚಿಕಿತ್ಸೆ ನೀಡಿದ್ದು ಸದ್ಯ ನಟ ಐಸಿಯುನಲ್ಲಿದ್ದಾರೆ. ಈಗಷ್ಟೇ ವೈದ್ಯಕೀಯ ಪ್ರೊಸಿಜರ್ ಸಂಪೂರ್ಣವಾಗಿದ್ದು, ನಟ ಚಿಕಿತ್ಸೆಗೆ ಸ್ಪಂದಿಸಿದ್ದಾರೆ.
ಅರೋಗ್ಯ ಸ್ಥಿತಿ ಗಮನಿಸಿ ಮೂರು ದಿನದ ಬಳಿಕ ನಟನನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಹೇಳಿದ್ದಾರೆ.