ಕೋಲ್ಕತ್ತ, ಆ. 25 (DaijiworldNews/SM): ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ರಾಷ್ಟ್ರೀಯ ನಗದೀಕರಣ ಯೋಜನೆ ಕುರಿತಂತೆ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ. ಹಾಗೂ ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.
"ಮೋದಿ ಅಥವಾ ಬಿಜೆಪಿಯದ್ದಾಗಿರದೇ ದೇಶಕ್ಕೆ ಸೇರಿದ ಆಸ್ತಿಯನ್ನು ಮಾರಾಟ ಮಾಡುವುದು ಕುತಂತ್ರ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಲದೆ, ಕೇಂದ್ರ ಸರಕಾರ ಆಸ್ತಿ ಮಾರಾಟ ಮಾಡಿ ಪಡೆದ ಹಣವನ್ನು ಚುನಾವಣೆ ಗೆಲ್ಲಲು ಬಳಕೆ ಮಾಡುತ್ತಿದೆ ಎಂದಿದ್ದಾರೆ. ಈ ವಿಚಾರವನ್ನು ನಾನು ಖಂಡಿಸುತ್ತೇನೆ. ಮಾರಾಟ ಮಾಡಲು ಮುಂದಾಗಿರುವ ಆಸ್ತಿಗಳು ದೇಶಕ್ಕೆ ಸೇರಿದ್ದಾಗಿದೆ. ಇದು ಬಿಜೆಪಿ ಅಥವಾ ಮೋದಿಗೆ ಸೇರಿದ್ದಲ್ಲ ಸ್ವತ್ತಲ್ಲ ಎಂದು ಗುಡುಗಿದ್ದಾರೆ.