ಚೆನ್ನೈ ,ಆ 25 (DaijiworldNews/MS): ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆಟಿ ರಾಘವನ್ ಅವರು ಮಂಗಳವಾರ ತಮ್ಮ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮದೇ ಪಕ್ಷದ ಮಹಿಳಾ ಕಾರ್ಯಕರ್ತ ಅನುಚಿತವಾಗಿ ವರ್ತಿಸಿ, ಅಶ್ಲೀಲವಾಗಿ ಮಾತನಾಡಿರುವ ಸಂಭಾಷಣೆ ಯೂಟ್ಯೂಬ್ ಕಾಣಿಸಿಕೊಂಡ ಬಳಿಕ ರಾಜೀನಾಮೆ ನೀಡಿದ್ದಾರೆ.. ಬಿಜೆಪಿಯ ಸದಸ್ಯರೆ ಆಗಿರುವ ಮದನ್ ರವಿಚಂದ್ರನ್ ಈ ವಿಡಿಯೊ ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದಾರೆ. ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ವಿಡಿಯೊವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ ಬಳಿಕ ವಿಡಿಯೊ ಅಪ್ಲೋಡ್ ಮಾಡಿರುವುದಾಗಿ ಮದನ್ ರವಿಚಂದ್ರನ್ ಹೇಳಿದ್ದಾರೆ
ಮಹಿಳೆಯೊಂದಿಗೆ ವಾಟ್ಸಾಪ್ ಕಾಲ್ನಲ್ಲಿ ಬೆತ್ತಲಾಗಿ, ಅಶ್ಲೀಲ ಸಂಭಾಷಣೆ ನಡೆಸಿದ ವಿಡಿಯೊ ವೈರಲ್ ಆದ ಬಳಿಕ ಕೆಟಿ ರಾಘವನ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಾಗಿದೆ. ಈ ಮಧ್ಯೆ, ಬಿಜೆಪಿ ರಾಜ್ಯ ಮುಖ್ಯಸ್ಥ ಅಣ್ಣಾಮಲೈ ಈ ಕುರಿತು ತನಿಖೆ ನಡೆಸಲು ಸಮಿತಿಯನ್ನು ರಚಿಸಿದ್ದಾರೆ.
ಮಧನ್ ರವಿಚಂದ್ರನ್ ಅವರು ತಮ್ಮ ಯೂಟ್ಯೂಬ್ ಪುಟದಲ್ಲಿ ತಮ್ಮ ಬಳಿ ಇಂತಹ "ಕುಟುಕು" ವೀಡಿಯೋಗಳಿವೆ ಹಾಗೂ ಅಣ್ಣಾಮಲೈ ಅವರ ಗಮನಕ್ಕೆ ತಂದೇ ಕೆಟಿ ರಾಘವನ್ ಅವರ ವಿಡಿಯೋವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಮಧನ್ ರವಿಚಂದ್ರನ್ ಹೇಳಿದ್ದಾರೆ.
ತಮ್ಮ 30 ವರ್ಷಗಳ ವೃತ್ತಿಜೀವನವನ್ನು ಯಾವುದೇ ತೊಂದರೆಗಳಿಲ್ಲದೆ ನಡೆಸಿರುವುದಾಗಿ, ತಮ್ಮ ಇಮೇಜ್ ಅನ್ನು ಹಾಳುಮಾಡಲು ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ನಾನು ರಾಜ್ಯಾಧ್ಯಕ್ಷ ಅಣ್ಣಾಮಲೈಯವರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿನ ನನ್ನ ಹುದ್ದೆಗೆ ನಾನು ರಾಜೀನಾಮೆ ನೀಡುತ್ತೇನೆ. ಈ ಆರೋಪಗಳನ್ನು ನಿರಾಕರಿಸುತ್ತಿದ್ದೇನೆ. ನ್ಯಾಯವು ಮೇಲುಗೈ ಸಾಧಿಸಲಿದೆ"ಎಂದು ಕೆಟಿ ರಾಘವನ್ ಹೇಳಿದ್ದಾರೆ.