ಚಿಕ್ಕಮಗಳೂರು, ಆ. 24(DaijiworldNews/HR): "ಭ್ರಷ್ಟಾಚಾರ ಮಾಡಿದರೆ ಅಥವಾ ಜೈಲಿಗೆ ಹೋದರೆ ಕಾಂಗ್ರೆಸ್ನಲ್ಲಿ ನಿಮಗೆ ಪ್ರಮೋಷನ್ ಸಿಗುತ್ತದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿನಯ್ ಕುಲಕರ್ಣಿ ಈಗ ನಿರಪರಾಧಿಯೂ ಅಲ್ಲ, ಅಪರಾಧಿಯೂ ಅಲ್ಲ, ಅವರು ಆಪಾದಿತ. ಭ್ರಷ್ಟಾಚಾರದ ಕಾಂಗ್ರೆಸ್ನ ರಾಜಕೀಯ ವ್ಯವಸ್ಥೆಯ ಒಂದು ಭಾಗ" ಎಂದರು.
ಇನ್ನು "ಡಿಕೆ ಶಿವಕುಮಾರ್ ಅವರು ಬೆಳೆದ ಬಂದ ರೀತಿಯಲ್ಲೇ ಆಲೋಚನೆ ಮಾಡುತ್ತಿದ್ದು, ಹಿಂದೆ ರಾಜೀವ್ ಗಾಂಧಿ ಅವರು ತನ್ನ ಮೇಲೆ ಗೂಂಡಾ ಅಂತ ಬಂದಾಗ ಗೂಂಡಾಗಳಿಗೆ ನಾವು ವಿಶೇಷವಾದ ಆದ್ಯತೆ ಕೊಡಬೇಕೆಂದು ಅವರೇ ಹೇಳಿದ್ದರು. ಅದನ್ನ ಅವರೇ ಒಪ್ಪಿದ್ದಾರೆ, ಮುಂದೆ ಜನ ಕಾಂಗ್ರೆಸ್ ಬಗ್ಗೆ ಎಚ್ಚರ ವಹಿಸಬೇಕಿದೆ" ಎಂದು ಹೇಳಿದ್ದಾರೆ.