ಬೆಂಗಳೂರು, ಆ 24 (DaijiworldNews/MS): ಜಾಮೀನಿನ ಮೇಲೆ ಹೊರಗಡೆ ಬಂದಿರುವ ಕೊಲೆ ಆರೋಪಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಪರ ಬ್ಯಾಟ್ ಬೀಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ದ ಕಿಡಿಕಾರಿರುವ ಬಿಜೆಪಿ ಡಿಕೆಶಿ ಪ್ರವರ್ಧಮಾನಕ್ಕೆ ಬಂದಿದ್ದೇ ಕೊತ್ವಾಲ್ ರೌಡಿ ಒಡನಾಟದಿಂದ ಹೀಗಾಗಿ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿದವರ ಜೊತೆಗೆ ಒಡನಾಟವಿರುವುದು ಯಾವುದೇ ಅತಿಶಯವಿಲ್ಲ ಇಲ್ಲ ಎಂದು ವ್ಯಂಗವಾಡಿದೆ.
ಈ ಬಗ್ಗೆ ರಾಜ್ಯ ಬಿಜೆಪಿ ಘಟಕವೂ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಜಾಮೀನಿನ ಮೇಲೆ ಹೊರಗಡೆ ಬಂದಿರುವ ಕೊಲೆ ಆರೋಪಿ ವಿನಯ್ ಕುಲಕರ್ಣಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜಾತಿಥ್ಯ ನೀಡಿದ್ದರಲ್ಲಿ ಯಾವುದೇ ಅತಿಶಯವಿಲ್ಲ.ಡಿಕೆಶಿ ಸುತ್ತ ಇರುವವರೆಲ್ಲರೂ ಬೀದಿ ಜಗಳದ ಪುಂಡರು. ಕೆಪಿಸಿಸಿ ಅಧ್ಯಕ್ಷರಾಗಿದ್ದೀರಿ, ಈಗಲಾದರೂ ತುಸು ಪ್ರಬುದ್ಧರಾಗಿ ಡಿಕೆಶಿಯವರೇ ಎಂದು ಲೇವಡಿ ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ರಾಜಕೀಯ ಪ್ರಯಾಣವನ್ನು ಅವಲೋಕಿಸಿದಾಗ, ವಿವಾದಿತ ವ್ಯಕ್ತಿಗಳು ಹಾಗೂ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿದವರ ಜೊತೆಗೆ ಒಡನಾಟ ಹೊಂದಿರುವುದು ಸ್ಪಷ್ಟವಾಗುತ್ತದೆ.ಎಷ್ಟಾದರೂ, ಡಿಕೆಶಿ ಪ್ರವರ್ಧಮಾನಕ್ಕೆ ಬಂದಿದ್ದೇ ಕೊತ್ವಾಲ್ ರಾಮಚಂದ್ರ ಎಂಬ ರೌಡಿಯ ಒಡನಾಟದಿಂದಲ್ಲವೇ!? ಎಂದು ವ್ಯಂಗ್ಯವಾಡಿದೆ.