ತುಮಕೂರು, ಆ. 24(DaijiworldNews/HR): "ಜೆಡಿಎಸ್ನವರನ್ನು ಕಾಂಗ್ರೆಸ್ಗೆ ಸೆಳೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ನಿಂದ ಶಾಕ್ ನೀಡಲು ಆಗಲ್ಲ, ಯಾಕೆಂದರೆ ನಾವು ಕಾಂಗ್ರೆಸ್ನ ಫ್ಯೂಸ್ ಕಿತ್ತಿದ್ದೇವೆ. ಹಾಗಾಗಿ ಕರೆಂಟ್ ಹರಿಯಲು ಬಿಟ್ಟಿಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ತನ್ನತ್ತ ಸೆಳೆಯುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ನಮ್ಮನ್ನು ಕಾಂಗ್ರೆಸ್ ಗೆ ಸೆಳೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ನಿಂದ ಶಾಕ್ ನೀಡಲು ಆಗಲ್ಲ, ಯಾಕೆಂದರೆ ನಾವು ಕಾಂಗ್ರೆಸ್ ನ ಫ್ಯೂಸ್ ಕಿತ್ತಿದ್ದೇವೆ. ಹಾಗಾಗಿ ಕರೆಂಟ್ ಹರಿಯಲು ಬಿಟ್ಟಿಲ್ಲ" ಎಂದು ಹೇಳಿದ್ದಾರೆ.
ಇನ್ನು ಜೆಡಿಎಸ್ ಎಂ ಎಲ್ ಸಿ ಬೆಮಲ್ ಕಾಂತರಾಜು ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, "ಆತ ಪಕ್ಷ ಬಿಟ್ಟು ತುಂಬಾ ದಿನವಾಯಿತು. ಆತನ ಬಗ್ಗೆ ಮಾತನಾಡಬೇಡಿ. ಪಕ್ಷದ ಬಾಗಿಲು ತೆರೆದಿದೆ. ಯಾರು ಬೇಕಾದರೂ ಬರಬಹುದು, ಹೋಗಬಹುದು" ಎಂದು ಹೇಳಿದ್ದಾರೆ.