ಬೆಂಗಳೂರು, ಆ 24 (DaijiworldNews/MS): ಕಳೆದ ವರ್ಷ ರಾಜ್ಯವನ್ನೇ ತಲ್ಲಣ ಗೊಳಿಸಿದ್ದ ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಸದ್ದು ಮಾಡಿದ್ದ ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್ ಸೇವಿಸಿರುವುದು ಎಫ್ಎಸ್ಎಲ್ ಪರೀಕ್ಷೆಯಲ್ಲಿ ಖಚಿತವಾಗಿದೆ.
ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು,ವೀರೇನ್ ಖನ್ನಾ, ಆರ್ಟಿಓ ಅಧಿಕಾರಿ ರವಿಶಂಕರ್, ನಟಿ ರಾಗಿಣಿ, ಸಂಜನಾ ಸೇರಿದಂತೆ ಪ್ರಮುಖ ಆರೋಪಿಗಳ ಕೂದಲು ಮಾದರಿ ಸಂಗ್ರಹಿಸಿ ಡ್ರಗ್ಸ್ ಸೇವನೆ ಸಂಬಂಧ ದೃಢಪಡಿಸಲು 2020ರ ಅಕ್ಟೋಬರ್ನಲ್ಲಿ ಹೈದರಾಬಾದ್ನಲ್ಲಿರುವ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಹಿಸಲಾಗಿದ್ದ ವರದಿ ಬಂದಿದೆ. ಸದರಿ ರಿಪೋರ್ಟ್ನಲ್ಲಿ ಇಬ್ಬರೂ ನಟಿಯರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಜತೆಗೆ ವಿರೇನ್ ಖನ್ನಾ ಕೂಡ ಡ್ರಗ್ಸ್ ಸೇವಿಸಿರುವುದು ಖಚಿತವಾಗಿದೆ ಎಂದು ಹೇಳಿದ್ದಾರೆ.
ಕೂದಲು ಪರೀಕ್ಷೆಯಲ್ಲಿ ಬಹುತೇಕ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದು ಸಾಬೀತಾಗಿದೆ. ಆರೋಪಿಗಳ ಕೂದಲನ್ನು ಕಳೆದ ವರ್ಷ ಹೈದರಾಬಾದ್ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಗೆ ಟೆಸ್ಟ್ಗಾಗಿ ಕಳುಹಿಸಲಾಗಿತ್ತು. ಈಗ ಅದರಲ್ಲಿ ಪಾಸಿಟಿವ್ ಬಂದಿದೆ ಎಂದು ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.