ನೋಯ್ಡಾ, ಆ 24 (DaijiworldNews/MS): ತಮ್ಮ ಮಗುವಿನ ಮೊದಲ ಹುಟ್ಟುಹಬ್ಬದ ಖುಷಿಯಲ್ಲಿ ಕುಟುಂಬವೊಂದು ಸಂಭ್ರಮಾಚರಣೆಯಲ್ಲಿ ತಲ್ಲೀನರಾಗಿತ್ತು. ಆದರೆ ಕ್ಷಣಾರ್ಧದಲ್ಲಿ ನಡೆದ ದುರ್ಘಟನೆ ಕುಟುಂಬವನ್ನು ನೋವಿನಕಡಲಿಗೆ ನೂಕಿಬಿಟ್ಟಿತು.
ಮೃತ ಮಗು ರಿವಾನ್ ಮನೆ ಮುಂದಿದ್ದ ಮೆಟ್ಟಿಲುಗಳು
ಗ್ರೇಟರ್ ನೋಯ್ಡಾದ ಬಿಸ್ರಖ್ ಠಾಣೆ ವ್ಯಾಪ್ತಿಯ ಕಾಸಾ ಗ್ರೀನ್ಸ್ 1 ಹೌಸಿಂಗ್ ಸೊಸೈಟಿಯಲ್ಲಿ ಸೋಮವಾರ ಪ್ಲ್ಯಾಟ್ ವೊಂದರಲ್ಲಿ ಸತ್ಯೇಂದ್ರ ಕಸಾನಾ ಕುಟುಂಬವೊಂದು ತಮ್ಮ ಒಂದು ವರ್ಷ ವಯಸ್ಸಿನ ರಿವಾನ್ ನ ಹುಟ್ಟುಹಬ್ಬದಿಂದ ಸಂಭ್ರಮಿಸುತ್ತಿದ್ದರು. ಆದರೆ ಅದೇ ಮಗು 12ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದು, ಆ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ಸತ್ಯೇಂದ್ರ ಕಸಾನಾ ಅವರ ಒಂದು ವರ್ಷದ ಗಂಡುಮಗುವಿನ ಹುಟ್ಟುಹಬ್ಬಕ್ಕಾಗಿ ಮನೆಯವರೆಲ್ಲರೂ ಸೇರಿಕೊಂಡು ಮನೆ ಅಲಂಕರಿಸುತ್ತಿದ್ದರು. ಕೆಲ ಮಂದಿ ಅತಿಥಿಗಳು ಕೂಡಾ ಆಗಮಿಸಿದ್ದರು. ಪುಟ್ಟ ಮಗು ರಿವಾನ್ ಫ್ಲ್ಯಾಟ್ನ ಬಾಗಿಲಿನ ಹೊರಗಿನ ಸಾಮಾನ್ಯ ಪ್ರದೇಶದಲ್ಲಿ ಆಟವಾಡುತ್ತಿದ್ದಾಗ ಮಗು 12 ಮಹಡಿಗಳ ಮೆಟ್ಟಿಲುಗಳ ಮೂಲಕ ಬಿದ್ದು ಮೃತಪಟ್ಟಿದ್ದಾನೆ.
ಕಸಾನಾ ಅವರ ಮನೆಯ ಬಾಗಿಲಿನ ಕೆಲವೇ ಹೆಜ್ಜೆ ಅಂತರದಲ್ಲಿ ಮೆಟ್ಟಲುಗಳ ಪಕ್ಕದ ಗೋಡೆ ಇದ್ದು, ಇಲ್ಲಿಂದ ಮಗು ಬಿದ್ದಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆ.
ಮೆಟ್ಟಲಿನ ಪಕ್ಕ ಕಬ್ಬಿಣದ ರೇಲಿಂಗ್ಸ್ ಇದ್ದು, ಇದಕ್ಕೆ ಸಮಾನಾಂತರದಲ್ಲಿ ಮಧ್ಯೆ ಸ್ಥಳಾವಕಾಶವಿದ್ದು, ಅಕ್ಕಪಕ್ಕದಲ್ಲಿ ಕಬ್ಬಿಣದ ಸಲಾಕೆಗಳು ಇರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ.