ನವದೆಹಲಿ, ಆ 24 (DaijiworldNews/MS): ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂಪುಟಕ್ಕೆ ಸೇರ್ಪಡೆಗೊಂಡ ನಂತರ ಕೇಂದ್ರ ಸಚಿವ ಪಶುಪತಿ ಕುಮಾರ್ ಪರಸ್ ಮೊದಲ ಬಾರಿಗೆ ಸೋಮವಾರ ತಮ್ಮ ಲೋಕಸಭಾ ಕ್ಷೇತ್ರ ಹಾಜಿಪುರಕ್ಕೆ ಭೇಟಿ ನೀಡಿದರು.
ಆದರೆ ಲೋಕ ಜನಶಕ್ತಿ ಪಕ್ಷದ ಸಂಸದರು ಹಾಜಿಪುರದಲ್ಲಿ ಪಶುಪತಿ ಕುಮಾರ್ ಪಾರಸ್ರನ್ನು ಭೇಟಿಯಾಗಲು ಧಾವಿಸುತ್ತಿದ್ದಂತೆ ಎಲ್ಜೆಪಿ ನಾಯಕ, ಸಂಸದ ಚಿರಾಗ್ ಪಾಸ್ವಾನ್ ಬೆಂಬಲಿತೆ ಪಶುಪತಿ ಕುಮಾರ್ ಪಾರಸ್ ಮೇಲೆ ಶಾಯಿ ಎಸೆದಿದ್ದಾರೆ.
ಚಿರಾಗ್ ಪಾಸ್ವಾನ್ ಬೆಂಬಲಿತೆಯ ಆಕ್ರೋಶಕ್ಕೆ ಬಲಿಯಾದ ಪಶುಪತಿ ಕುಮಾರ್ ಪಾರಸ್ ಕೊನೆಗೆ ತಾನು ಧರಿಸಿದ್ದ ಕುರ್ತಾ ಬಟ್ಟೆಯನ್ನು ಬದಲಾಯಿಸಬೇಕಾದ ಪರಿಸ್ಥಿತಿ ಬಂದೊದಗಿತು. ಜುಲೈ 8 ರಂದು ಬಿಹಾರದ ಹಾಜಿಪುರ ಸಂಸದ ಪಶುಪತಿ ಕುಮಾರ್ ಪಾರಸ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟಕ್ಕೆ ಆಯ್ಕೆ ಆಗುವ ಮೂಲಕ ಕೇಂದ್ರ ಸಚಿವರಾಗಿದ್ದಾರೆ. ಹಾಗೆಯೇ ಪಶುಪತಿ ಕುಮಾರ್ ಪಾರಸ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಹಾರ ಸಂಸ್ಕರಣಾ ಕಾರ್ಖಾನೆಗಳ ಖಾತೆಯನ್ನು ನೀಡಿದ್ದಾರೆ. ಈ ಖಾತೆಯನ್ನು ಇದಕ್ಕೂ ಮೊದಲು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನಿರ್ವಹಿಸುತ್ತಿದ್ದರು.
ಈ ಹಿಂದೆ ಎಲ್ಜೆಪಿಯ ಬಿಹಾರ ಘಟಕದ ಮುಖ್ಯಸ್ಥರಾಗಿದ್ದ ಮತ್ತು ಪ್ರಸ್ತುತ ಅದರ ವಿಭಜಿತ ಬಣದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಪಶುಪತಿ ಪರಾಸ್, 1978 ರಲ್ಲಿ ತಮ್ಮ ಹುಟ್ಟೂರಾದ ಖಗರಿಯಾ ಜಿಲ್ಲೆಯ ಅಲೌಲಿಯಿಂದ ಜನತಾ ಪಕ್ಷದ ಶಾಸಕರಾಗಿ ತಮ್ಮ ಇನಿಂಗ್ಸ್ ಆರಂಭಿಸಿದರು, ಈ ಸ್ಥಾನವನ್ನು ಹಿಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಪ್ರತಿನಿಧಿಸಿದ್ದರು.