ಶ್ರೀನಗರ, ಆ.23 (DaijiworldNews/HR): ತಾಲಿಬಾನಿ ಉಗ್ರರು ಅಥವಾ ಐಎಸ್ಐಎಸ್ನೊಂದಿಗೆ ಮೆಹಬೂಬಾ ಮುಫ್ತಿಗೆ ಸಂಪರ್ಕವಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಮುಫ್ತಿ ಅವರು ತಾಲಿಬಾನ್ ಉಗ್ರರನ್ನು ನೋಡಿ ಪ್ರಧಾನಿ ಮೋದಿ ಪಾಠ ಕಲಿಯಬೇಕು ಎಂದು ಹೇಳಿದ್ದು, ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಮೆಹಬೂಬಾ ಅವರು ತಕ್ಷಣ ಕ್ಷಮೆ ಕೇಳಬೇಕು. ಅವರಿಗೆ ತಾಲಿಬಾನ್ ಜೊತೆಗೆ ಏನಾದರೂ ಸಂಪರ್ಕ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದೆ.
"ಅಫ್ಘಾನಿಸ್ತಾನದಲ್ಲಿ ಅಷ್ಟು ಬಲಿಷ್ಠವಾದ ಅಮೆರಿಕದ ಸೈನಿಕರಿದ್ದರೂ ತಾಲಿಬಾನಿಗಳು ಅವರನ್ನು ಯಶಸ್ವಿಯಾಗಿ ಹೊರಹಾಕಿದರು. ಅದನ್ನು ನೋಡಿ ಮೋದಿ ಸರ್ಕಾರ ಪಾಠ ಕಲಿಯಬೇಕು. ಕಾಶ್ಮೀರದ ಜನರೊಂದಿಗೆ ಕೂಡಲೇ ಮಾತುಕತೆ ನಡೆಸಿ, ವಿಶೇಷ ಸ್ಥಾನಮಾನ ಮರುಸ್ಥಾಪಿಸಬೇಕು. ಇಲ್ಲದಿದ್ದರೆ, ಏನು ಬೇಕಾದರೂ ಆಗಬಹುದು" ಎಂದು ಈ ಹಿಂದೆ ಮೆಹಬೂಬಾ ಹೇಳಿದ್ದರು.