ದಾವಣಗೆರೆ, ಆ 23(DaijiworldNews/MS): ಬಂದೂಕು ಕ್ಲೀನ್ ಮಾಡುವಾಗ ಅವಘಡ ನಡೆದು ಒಬ್ಬ ಕಾನ್ಸ್ಟೇಬಲ್ ಸಾವನ್ನಪ್ಪಿರುವ ಘಟನೆ ನಗರದ ಡಿಎಆರ್ ಶಸ್ತ್ರಾಸ್ತ್ರಗಾರದಲ್ಲಿ ನಡೆದಿದೆ.
ಮೃತ ಕಾನ್ಸ್ಟೇಬಲ್ ಅವರನ್ನು ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿ ಆರ್. ಚೇತನ್ (28) ಎಂದು ಗುರುತಿಸಲಾಗಿದೆ. ಇವರು 2012 ಬ್ಯಾಚ್ನಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದರು.
ಬೆಳಗ್ಗೆ ತರಬೇತಿ ಮುಗಿಸಿ, ಬಂದೂಕು ಸ್ವಚ್ಛ ಮಾಡುವ ವೇಳ ಅವಘಡ ಸಂಭವಿಸಿದೆ. ಮಿಸ್ ಫೈರಿಂಗ್ ಆಗಿ ಚೇತನ್ ಕುತ್ತಿಗೆ ಭಾಗಕ್ಕೆ ಬುಲೆಟ್ ಬಿದ್ದಿದ್ದು ತಕ್ಷಣ ಗಾಯಗೊಂಡ ಚೇತನ್ ಅವರನ್ನು ತುರ್ತಾಗಿ ನಗರ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆ ತಲುಪುವಷ್ಟರಲ್ಲಿ ಚೇತನ್ ಸಾವನ್ನಪ್ಪಿದ್ದರು. ಚೇತನ್ ಅವರ ಪತ್ನಿ ಗರ್ಭವತಿಯಾಗಿದ್ದು, ಕುಟುಂಬ ಸದಸ್ಯರ ಅಕ್ರಂದನ ಮುಗಿಲು ಮುಟ್ಟಿದೆ.
ಪೂರ್ವ ವಲಯ ಐಜಿಪಿ ಎಸ್ ರವಿ, ಎಸ್ಪಿ ಸಿಬಿ ರಿಷ್ಯಂತ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.