ಮಲಪ್ಪುರಂ, ಆ 23(DaijiworldNews/MS): ಯುವ ವೈದ್ಯೆಯೊಬ್ಬಳು ತಮ್ಮ ಮಲಗುವ ಕೋಣೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತರನ್ನು ಮಲಪ್ಪುರಂ ಕೊಝಿಕ್ಕೊತ್ತೂರು ಮೂಲದ ಶಾಹಿದಾ (24) ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಿಗ್ಗೆ 8.30 ರ ವೇಳೆಗೆ ಶಾಹಿದಾ ತನ್ನ ಮಲಗುವ ಕೋಣೆಯಲ್ಲಿ ಗಂಭೀರ ಸುಟ್ಟ ಗಾಯಗಳೊಂದಿಗೆ ಪತ್ತೆಯಾಗಿದ್ದಳು. ತಕ್ಷಣ ಆಕೆಯನ್ನು ಮಂಜೇರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತಾದರೂ, ಆಕೆಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ.
ಶಾಹಿದಾ ಅವರ ವಿವಾಹ ಇದೇ ಆಗಸ್ಟ್ 28 ಕ್ಕೆ ನಿಗದಿಯಾಗಿತ್ತು. ವಿವಾಹಕ್ಕೆ ಒಂದು ವಾರ ಬಾಕಿ ಇರುವಾಗಲೇ ಈ ಘಟನೆ ನಡೇದಿದೆ. ಶಾಹಿದಾ ಅವರು ಆಟೋ ಚಾಲಕ ಶೌಕಥಾಲಿ ಮತ್ತು ಸೈನಾಬಾ ದಂಪತಿಯ ಪುತ್ರಿಯಾಗಿದ್ದಾರೆ.