ನವದೆಹಲಿ, ಆ 23(DaijiworldNews/MS): ಅಫ್ಗಾನಿಸ್ತಾನ ಬಿಕ್ಕಟ್ಟು ಬಗ್ಗೆ ಪ್ರತಿಕ್ರಿಯಿಸಿ , "ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದು ಏಕೆ ಅಗತ್ಯವಾಗಿದೆ ಎಂದು ಈಗ ನಿಖರವಾಗಿ ಅರ್ಥವಾಗಿರಬಹುದು" ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
2019ರಲ್ಲಿ ಸಿಎಎ ಕಾಯ್ದೆಯನ್ನು ಅಂಗೀಕರಿಸಿದಾಗ ರಾಷ್ಟ್ರ ರಾಜಧಾನಿಯಲ್ಲಿ ಹಲವು ವಾರಗಳ ಕಾಲ ಪ್ರತಿಭಟನೆಗಳು ನಡೆದಿದ್ದವು. ಗಲಭೆಯಲ್ಲಿ ಸುಮಾರು 100 ಜನರು ಸಾವನ್ನಪ್ಪಿದ್ದರು.
"ನಮ್ಮ ಅಸ್ಥಿರ ನೆರೆರಾಷ್ಟ್ರಗಳ ಇತ್ತೀಚಿನ ಬೆಳವಣಿಗೆಗಳು ಸಿಖ್ಖರು ಮತ್ತು ಹಿಂದುಗಳು ಕಷ್ಟಕರವಾದ ಸಮಯವನ್ನು ಎದುರಿಸುತ್ತಿದ್ದಾರೆ, ಈ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದು ಏಕೆ ಅಗತ್ಯವಾಗಿದೆ" ಎಂಬುದು ಅರ್ಥವಾಗಬಹುದು ಎಂದು ಪುರಿ ಟ್ವೀಟ್ ಮಾಡಿದ್ದಾರೆ.
2019ರಲ್ಲಿ ಸಿಎಎ ಕಾಯ್ದೆಯೂ 2015ಕ್ಕೂ ಮುನ್ನ ಭಾರತಕ್ಕೆ ಬಂದ ನೆರೆಹೊರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳ ಕಿರುಕುಳಕ್ಕೊಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಈ ಕಾನೂನು ಪೌರತ್ವವನ್ನು ಒದಗಿಸುತ್ತದೆ.
ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್ ನಗರದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಹಿನ್ನಲೆಯಲ್ಲಿ ಭಾರತವು ಭಾನುವಾರ 329 ನಾಗರಿಕರು ಅಫ್ಘಾನಿಸ್ತಾನದಿಂದ ಏರ್ ಲಿಪ್ಟ್ ಮಾಡಿತ್ತು. ಇದರಲ್ಲಿಇಪ್ಪತ್ತೂರು ಮಂದಿ ಅಫ್ಘಾನಿ ಹಿಂದೂಗಳು ಮತ್ತು ಸಿಖ್ಖರಿದ್ದಾರೆ. ಇದರಲ್ಲಿ ಇಬ್ಬರು ಅಫ್ಘಾನ್ ಸಂಸದರೂ ಸೇರಿದ್ದಾರೆ.