ಗೋವಾ,ಆ 23(DaijiworldNews/MS): ಕಾಲಿವುಡ್ನಲ್ಲಿ ಸೂಪರ್ ಡೂಪರ್ ಹಿಟ್ ಪಡೆದಿದ್ದ ಕಾಂಚನಾ-3 ಸಿನಿಮಾದ ರಷ್ಯನ್ ನಟಿ , ಮಾಡೆಲ್ ಅಲೆಕ್ಸಾಂಡ್ರಾ ಕ್ಸಾವಿ (23) ಮೃತದೇಹ ಪತ್ತೆಯಾಗಿದೆ.
ಅಲೆಕ್ಸಾಂಡ್ರಾ ಅವರು ರಾಘವ ಲಾರೆನ್ಸ್ ಅವರ ಕಾಂಚನಾ 3 ಚಿತ್ರದಲ್ಲಿ ನಟಿಸಿದ್ದಾರೆ. ಗೋವಾದಲ್ಲಿರುವ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಎಂದು ಪ್ರಾಥಮಿಕವಾಗಿ ತೀರ್ಮಾನವಾಗಿದ್ದರೂ ನಟಿಯ ಸಾವಿನ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಲೆಕ್ಸಾಂಡ್ರಾ ಮೃತದೇಹ ಮನೆಯಲ್ಲಿ ಪತ್ತೆಯಾಗಿದ್ದು ಇತ್ತೀಚೆಗೆ ತಾನೆ ತಮ್ಮ ಬಾಯ್ ಫ್ರೆಂಡ್ ನಿಂದ ದೂರವಾಗಿದ್ದರು. ಇದಾದ ಬಳಿಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು.
ಅಲೆಕ್ಸಾಂಡ್ರಾ ರಷ್ಯಾದವರಾಗಿದ್ದು, ಅವರ ಕುಟುಂಬಸ್ಥರು ರಷ್ಯಾದಲ್ಲಿರುವುದರಿಂದ ಅವರಿಗೆ ಮಾಹಿತಿ ನೀಡಲಾಗಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ತನಿಖೆ ನಡೆಸಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.