ಪಾಟ್ನಾ, ಆ.23 (DaijiworldNews/HR): ಬಿಹಾರದ ಸಾರಣ ಜಿಲ್ಲೆಯಲ್ಲಿ ವಿಷಕಾರಿ ಹಾವುಗಳಿಗೆ ಸೋದರಿಯರಿಂದ ರಾಖಿ ಕಟ್ಟಿಸಲು ಮುಂದಾಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ಮನಮೋಹನ್ ಉರ್ಫ್ ಬವುರಾ(25 ) ಎಂದು ಗುರುತಿಸಲಾಗಿದೆ.
10 ವರ್ಷಗಳಿಂದ ಯುವಕ ಹಾವುಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದು, ಭಾನುವಾರ ಎರಡು ನಾಗರಹಾವು ಹಿಡಿದಿದ್ದ ಮನಮೋಹನ್ ತನ್ನ ಇಬ್ಬರು ಸೋದರಿಯರಿಂದ ರಾಖಿ ಕಟ್ಟಿಸಲು ಮುಂದಾಗಿದ್ದನು. ಈ ವೇಳೆ ಬಾಲ ಹಿಡಿದುಕೊಂಡಿದ್ದಾಗ ಒಂದು ಹಾವು ಮನಮೋಹನ್ ಹೆಬ್ಬರಳು ಕಚ್ಚಿದೆ.
ಇನ್ನು ಹಾವು ಕಚ್ಚಿದ ತಕ್ಷಣ ಸ್ಥಳೀಯರು ಗಿಡಮೂಲಿಕೆ ಔಷಧಿ ಕೊಟ್ಟು ಚಿಕಿತ್ಸೆ ನೀಡಿದ್ದಾರೆ. ಆದರೆ ಮನಮೋಹನ್ ರೋಗ್ಯ ಏರುಪೇರಾಗಿದ್ದರಿಂದ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದು, ಬಳಿಕ ಅಲ್ಲಿಂದ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮನಮೋಹನ್ ಸಾವನ್ನಪ್ಪಿದ್ದಾನೆ.