ಕೋಲ್ಕತ್ತಾ, ಆ 23(DaijiworldNews/MS): ಸುಮಾರು 10 ಕೋಟಿ ರೂಪಾಯಿ ಹಣಕಾಸು ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಪಶ್ಚಿಮಬಂಗಾಳ ವಿಧಾನ ಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದ ಪಶ್ಚಿಮಬಂಗಾಳದ ಮಾಜಿ ಸಚಿವ ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನು ಭಾನುವಾರ ಬಂಧಿಸಲಾಗದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಷ್ಣುಪುರದ ಮಾಜಿ ಶಾಸಕ, ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಡಿಸೆಂಬರ್ನಲ್ಲಿ ಟಿಎಂಸಿಯಿಂದ ಬಿಜೆಪಿ ಸೇರಿದ್ದರು. ಸುಮಾರು 9.91 ಕೋಟಿ ರೂಪಾಯಿ ಹಣಕಾಸು ಹಗರಣ ಸಂಬಂಧಿಸಿ ಎಸ್ಡಿಪಿಒ ಬಿಷ್ಣುಪುರದಲ್ಲಿ ತನಿಖೆ ನಡೆಸಿದೆ.
ಬಿಷ್ಣುಪುರ ಪುರಸಭೆಯ ಭಾಗವಾಗಿರುವ ಟಿಎಂಸಿ ನಾಯಕರೊಬ್ಬರು ಮುಖರ್ಜಿ ಅವರು ನಾಗರಿಕ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಇ-ಟೆಂಡರ್ಗೆ ಸಂಬಂಧಿಸಿದ ಹಣದ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಆಡಿಟ್ ಸಂದರ್ಭದಲ್ಲಿ ಮುಖರ್ಜಿಯವರ ಅವಧಿಯಲ್ಲಿ ಹಲವಾರು ನಕಲಿ ಇ-ಟೆಂಡರ್ಗಳನ್ನು ರವಾನಿಸಲಾಗಿದೆ ಎಂದು ಕಂಡುಬಂದಿದೆ ಎಂದು ಆರೋಪಿಸಿದ್ದರು.
ಈ ಹಗರಣಕ್ಕೆ ಸಂಬಂಧಿಸಿದಂರೆ ವಿಚಾರಣೆ ಸಂದರ್ಭ ಸಮರ್ಪಕ ಉತ್ತರ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಮುಖರ್ಜಿ ಅವರನ್ನು ಬಂಧಿಸಲಾಗಿದೆ ಎಂದು ಬಂಕುರಾದ ಎಸ್.ಪಿ. ಧೃತಿಮನ್ ಸರ್ಕಾರ್ ಹೇಳಿದ್ದಾರೆ.