ನವದೆಹಲಿ, ಆ. 22 (DaijiworldNews/SM): ನಿರಂತರ ಏರಿಕೆಯನ್ನೇ ಕಂಡಿದ್ದ ಪೆಟ್ರೋಲ್ ದರ ಅಲ್ಪ ಇಳಿಕೆಯಾಗಿದ್ದು, ಗ್ರಾಹಕ ವರ್ಗಕ್ಕೆ ಹೆಚ್ಚಿನ ಲಾಭವಿಲ್ಲ.
ವರ್ಷಗಳ ಹಿಂದೆ ಪೆಟ್ರೋಲ್ ಹಾಗೂ ಡೀಸೆಲ್ ದರ ನಿತ್ಯ ಪರಿಷ್ಕರಣೆಗೆ ಅವಕಾಶ ನೀಡಲಾಗಿತ್ತು. ಆ ಮೂಲಕ ಬೆಲೆ ಏರಿಕೆಯಿಂದ ತಪ್ಪಿಸಬಹುದು ಎನ್ನಲಾಗಿತ್ತು. ನಿತ್ಯ ದರಪರಿಷ್ಕರಣೆಯಾದ ಬಳಿಕ ಬಹುತೇಕ ಸಂದರ್ಭದಲ್ಲಿ ದರ ಹೆಚ್ಚಳವೇ ಆಗಿದೆ. ಪೆಟ್ರೋಲ್ ದರ ನೂರರ ಗಡಿದಾಟುವಾಗಲೇ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಬೆಲೆ ಏರಿಕೆ ಎಂಬುವುದು ನಿಂತಿರಲಿಲ್ಲ.
ಸದ್ಯ ರವಿವಾರದಂದು ಇಪ್ಪತ್ತು ಪೈಸೆ ಇಳಿಕೆ ಮಾಡಲಾಗಿದೆ. ಆ ಮೂಲಕ ಏರಿಕೆಯಲ್ಲೇ ಇದ್ದ ದರ ಇಳಿಕೆಯೂ ಆಗುತ್ತದೆ ಎನ್ನುವುದನ್ನು ನೆನಪಿಸಿದಂತಾಗಿದೆ. ಇಂದಿನ ದರ ಇಳಿಕೆ ಜನಸಾಮಾನ್ಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ಲಾಭವಾಗದು. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಗೊಂಡಲ್ಲಿ ಉತ್ತಮ ಎನ್ನುವುದು ಗ್ರಾಹಕರ ಲೆಕ್ಕಾಚಾರ.