ನವದೆಹಲಿ, ಆ. 22 (DaijiworldNews/SM): ಕೋವಿಡ್ ಸೋಂಕು ವಕ್ಕರಿಸಿದ ಬಳಿಕ ಲಾಕ್ ಡೌನ್ ಹಾಗೂ ಹಲವು ನಿರ್ಬಂಧಗಳ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಅಪಾರ ನಷ್ಟವನ್ನು ಅನುಭವಿಸಿದೆ. ಕೇಂದ್ರ ಸಚಿವ ರಾವ್ ಸಾಹೇಬ್ ದನ್ವೆ ನೀಡಿರುವ ಮಾಹಿತಿ ಪ್ರಕಾರ 36,000 ಕೋಟಿ ರೂಪಾಯಿ ನಷ್ಟ ಎದುರಿಸಿದೆ ಎನ್ನಲಾಗಿದೆ.
ಗೂಡ್ಸ್ ರೈಲುಗಳು ರಾಷ್ಟ್ರೀಯ ಸಾಗಣೆ ವಿಭಾಗದ ನಿಜವಾದ ಆದಾಯದ ಮೂಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದನ್ವೆ ಹೇಳಿದ್ದಾರೆ.
ಕೊರೋನಾದಿಂದಾಗಿ ಉಂಟಾಗಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ರೈಲು ಸಂಚಾರ ತಡೆಯಲಾಗಿತ್ತು. ಇದರಿಂದಾಗಿ ಅಂತರಾಜ್ಯ ಪ್ರಯಾಣವಿಲ್ಲದೆ ರೈಲ್ವೇ ಸಂಚಾರವಿಲ್ಲದೆ ನಷ್ಟ ಸಂಭವಿಸಿದೆ. ಇನ್ನೊಂದೆಡೆ ಸದ್ಯ ರೈಲು ಸಂಚಾರ ಆರಂಭಗೊಂಡಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಇದು ರೈಲ್ವೇ ಆದಾಯದ ಮೇಲೆ ಕತ್ತರಿ ಹಾಕಿದೆ.