ಗುವಾಹಟಿ, ಆ 22 (DaijiworldNews/PY): ಬ್ಯಾಂಕ್ ದರೋಡೆಗೆ ಯತ್ನಿಸಿದ ಮೂವರು ದರೋಡೆಕೋರರನ್ನು ಪೊಲೀಸರು ಗುಂಡಿಕ್ಕಿ ಕೊಂದ ಘಟನೆ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಚಂಗಮಾರಿ ಬಳಿಯ ಬೋತ್ಗಾನ್ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
"ಪೊಲೀಸರ ಮೇಲೆ ಡಕಾಯಿತರು ಗುಂಡಿನ ದಾಳಿ ನಡೆಸಿದ್ದರು, ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡಾ ಗುಂಡಿನ ದಾಳಿ ನಡೆಸಿ ದರೋಡೆಕೋರರನ್ನು ಹತ್ಯೆ ಮಾಡಿದ್ದಾರೆ" ಎಂದು ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತ್ ಟ್ವೀಟ್ ಮಾಡಿದ್ದಾರೆ.
"ದರೋಡೆಕೋರರಿಂದ ವಾಹನಗಳು ಸೇರಿದಂತೆ ಸಲಕರಣೆಗಳು, ಗ್ಯಾಸ್ ಕಟ್ಟರ್, ಆಕ್ಸಿಜನ್ ಸಿಲಿಂಡರ್ ಹಾಗೂ ಎರಡು ಪಿಸ್ತೂಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
"ಮೃತದೇಹಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಇಡಲಾಗಿದೆ. ಸ್ಥಳದಿಂದ ಪರಾರಿಯಾಗಿರುವ ಉಳಿದ ಮೂವರಿಗೆ ಹುಡುಕಾಟ ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ಅತಿದೊಡ್ಡ ಬ್ಯಾಂಕ್ ದರೋಡೆಯನ್ನು ತಡೆಗಟ್ಟಿರುವ ಅಸ್ಸಾಂ ಪೊಲೀಸರ ಕಾರ್ಯವನ್ನು ಸಿಎಂ ಹೇಮಂತ ವಿಸ್ವಾ ಶರ್ಮಾ ಶ್ಲಾಘಿಸಿದ್ದಾರೆ" ಎಂದು ಡಿಜಿಪಿ ತಿಳಿಸಿದ್ದಾರೆ.